TV9 News: PM Narendra Modi At G20 Summit in Brisbane, Australia...,
ಆಸ್ಟ್ರೇಲಿಯಾದ ಬ್ರಿಸ್ಬೇನ್ನಲ್ಲಿ ಜಿ-20 ಶೃಂಗಸಭೆ ಆರಂಭಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ. ಜಗತ್ತಿನ 20 ಮುಂಚೂಣಿ ದೇಶಗಳ ನಾಯಕರು ಶೃಂಗಸಭೆ ಪಾಲ್ಗೊಂಡಿದ್ದಾರೆ. ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬಾಟ್ ಶೃಂಗಸಭೆಗೆ ಆಗಮಿಸ್ತಿರುವ ಎಲ್ಲ ನಾಯಕರನ್ನು ಸ್ವಾಗತಿಸ್ತಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಇಂಗ್ಲೆಂಡ್ ಪ್ರಧಾನಿ ಡೇವಿಡ್ ಕ್ಯಾಮರೂನ್, ಚೀನಾ ಪ್ರಧಾನಿ ಕ್ಸಿ ಜಿನ್ ಪಿಂಗ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಸೇರಿದಂತೆ ವಿವಿಧ ರಾಷ್ಟ್ರಗಳ ನಾಯಕರು ಪಾಲ್ಗೊಂಡಿದ್ದಾರೆ. ಎರಡು ದಿನಗಳ ಶೃಂಗಸಭೆಯಲ್ಲಿ ಜಾಗತಿಕ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಸಭೆಯಲ್ಲಿ ಸ್ವಾಗತಿಸಿ ಮಾತನಾಡಿದ ಆಸ್ಟ್ರೇಲಿಯಾ ಟೋನಿ ಅಬಾಟ್, ಭಯೋತ್ಪಾದನೆ ಮುಕ್ತ ಜಗತ್ತು ನಿರ್ಮಿಸುವುದು ನಮ್ಮ ಆದ್ಯತೆಯಾಗಬೇಕು ಅಂತಾ ಹೇಳಿದ್ರು.
--------
ಇನ್ನು ಶೃಂಗಸಭೆ ಆರಂಭ ವಾಗುತ್ತಿದ್ದಂತೆ, ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
----------
1999ರಲ್ಲಿ ಜಿ-20 ಒಕ್ಕೂಟವನ್ನು ಸ್ಥಾಪಿಸಲಾಗಿದ್ದು, ಅಮೆರಿಕಾ, ಭಾರತ, ಚೀನಾ, ಜಪಾನ್, ಇಂಗ್ಲೆಂಡ್, ಆಸ್ಟ್ರೇಲಿಯಾ ಸೇರಿ 19 ರಾಷ್ಟ್ರಗಳು, ಯುರೋಪಿಯನ್ ಯೂನಿಯನ್ ಸದಸ್ಯತ್ವ ಪಡೆದಿದೆ. ಜಗತ್ತಿನ ಒಟ್ಟು ಜನಸಂಖ್ಯೆಯ 3ನೇ 2ರಷ್ಟು ಜನರು ಈ ರಾಷ್ಟ್ರಗಳಲ್ಲೇ ಇದ್ದಾರೆ. ಇನ್ನು ಜಗತ್ತಿನ ಒಟ್ಟು ಜಿಡಿಪಿಯ 80 ಶೇಕಡಾ ಕೊಡುಗೆ ಈ ರಾಷ್ಟ್ರಗಳದ್ದಾಗಿವೆ. ಇನ್ನು ವಿಶ್ವ ವ್ಯಾಪಾರದ 75ರಷ್ಟು ಈ 20 ರಾಷ್ಟ್ರಗಳಲ್ಲೇ ನಡೆಯುತ್ತಿದೆ.
----------
ಶೃಂಗಸಭೆಗೂ ಮುನ್ನ ನಡೆದ ಬ್ರಿಕ್ಸ್ ನಾಯಕರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಪ್ಪು ಹಣದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ವಿದೇಶಗಳಲ್ಲಿ ಭಾರತೀಯರು ಅನಧಿಕೃತವಾಗಿ ಇಟ್ಟಿರುವ ಹಣವನ್ನು ವಾಪಸ್ ತರಿಸಿಕೊಳ್ಳುವುದು ನಮ್ಮ ಮೊದಲ ಆದ್ಯತೆಯಾಗಿದೆ ಅಂತ ಮೋದಿ ಬ್ರಿಕ್ಸ್ ನಾಯಕರಿಗೆ ತಿಳಿಸಿದ್ದಾರೆ. ಇನ್ನು ಜಿ-20 ಸಭೆಯಲ್ಲೂ ಮೋದಿ ಕಪ್ಪು ಹಣದ ಬಗ್ಗೆ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ.