TV9 Live: Duniya Vijay Blames DCP Devaraj For His Divorce Episode...,
ದುನಿಯಾ ವಿಜಯ್ ಮತ್ತು ನಾಗರತ್ನ ಸುಖೀ ಸಂಸಾರ ಒಡೆಯಲು ಕಾರಣ ಏನು ಅನ್ನೋದೀಗ ಬಹಿರಂಗವಾಗಿದೆ. ಖುದ್ದು ವಿಜಯ್ ತಮ್ಮ ಸಂಸಾರದಲ್ಲಿ ಹುಳಿ ಹಿಂಡಿದ್ದು ಡಿಸಿಪಿ ದೇವರಾಜ್ ಅಂತಾ ಆರೋಪಿಸಿದ್ದಾರೆ. ದೇವರಾಜ್ ಪೊಲೀಸ್ ಇಲಾಖೆಯಲ್ಲಿ ಕೆಲಸಾ ಮಾಡಲು ನಾಲಾಯಕ್ಕು ಅಂತಲೂ ದೂರಿದ್ದಾರೆ. ಈ ಬಗ್ಗೆ ನಾಳೆ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡೋದಕ್ಕೂ ವಿಜಯ್ ನಿರ್ಧರಿಸಿದ್ದಾರೆ. ಜಾತಿ ಹೆಸರಲ್ಲಿ ಬೇಳೆ ಬೇಯಿಸಿಕೊಳ್ಳೋ ದೇವರಾಜ್, ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲಾ ಈ ಬಗ್ಗೆ ತಮ್ಮ ಬಳಿ ಸಾಕಷ್ಟು ಸಾಕ್ಷ್ಯಗಳಿದ್ದು ಅವೆಲ್ಲವನ್ನೂ ಕಮೀಷನರ್ ಗೆ ನೀಡೋದಾಗಿಯೂ ಸ್ಪಷ್ಟಪಡಿಸಿದ್ದಾರೆ. ಸದ್ಯ ಬಿಎಂಟಿಎಫ್ ನಲ್ಲಿ ಎಸ್ಪಿಯಾಗಿರೋ ದೇವರಾಜ್, ತಮ್ಮ ಸ್ವಾರ್ಥಕ್ಕಾಗಿ ಎಂಥವರ ಜೀವನದಲ್ಲೂ ಆಟವಾಡಬಲ್ಲರು ಅಂತಲೂ ದೂರಿದ್ದಾರೆ.