TV9 Breaking: Major Burglary in House at Hubli; Cash, Gold and Silver Stolen....,
ಹುಬ್ಬಳ್ಳಿಯಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ.ಡಾಲರ್ಸ್ ಕಾಲೋನಿಯ ಮಹಮ್ಮದ್ ಅಲಿ ಬೆಟಗೇರಿ ನಿವಾಸದಲ್ಲಿ ಕಳ್ಳತನ ಮಾಡಿರೋ ಖದೀಮರು ಮಗಳ ನಿಶ್ಚಿತಾರ್ಥಕ್ಕೆ ತಂದಿಟ್ಟಿದ್ದ ಚಿನ್ನಾಭರಣ ಚೋರಿ ಮಾಡಿದ್ದಾರೆ. ಇವರ ಮನೆಯಲ್ಲಿದ್ದ 40 ಗ್ರಾಂ ಚಿನ್ನ, ಒಂದೂವರೆ ಕೆ.ಜಿ. ಬೆಳ್ಳಿ, 15 ಬೆಳ್ಳಿ ನಾಣ್ಯಗಳು, 3 ಲಕ್ಷ ಮೌಲ್ಯದ 22 ವಾಚ್, 15 ಬಂಗಾರ ಲೇಪಿತ ಪೆನ್ನು ಹಾಗೂ 1ಲ್ಯಾಪ್ ಟಾಪ್ ಕಳ್ಳತನವಾಗಿದೆ. ಭಾನುವಾರ ಮಹಮ್ಮದ್ ಅಲಿ ಮಗಳ ನಿಶ್ಚಿತಾರ್ಥವಿತ್ತು. ನಿನ್ನೆ ರಾತ್ರಿ ಪತ್ರಿಕೆ ನೀಡಲು ಹೊರ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ಯಾರು ಇರಲಿಲ್ಲ. ಈ ವೇಳೆ ಕಳ್ಳರು ಕೈಚಳಕ ತೋರಿಸಿದದ್ದಾರೆ.ಸ್ಥಳಕ್ಕೆ ಗೋಕುಲರಸ್ತೆ ಠಾಣೆ ಪೊಲೀಸರು ಶ್ವಾನದಳ, ಬೆರಳಚ್ಚು ತಜ್ಞರ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.