TV9 News: Fans Celebrate TV9's 8th Anniversary Across Karnataka...,
ಇವತ್ತು ಟಿವಿ9 ಸುದ್ದಿವಾಹಿನಿಗೆ 8ನೇ ವಾರ್ಷಿಕೋತ್ಸವ. ಹೀಗಾಗಿ, ಟಿವಿ9 ಅಭಿಮಾನಿಗಳ ವತಿಯಿಂದ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಸಂಕಷ್ಟಹರ ಚತುರ್ಥಿ ಪೂಜೆ ಜೊತೆಗೆ ಬುಲ್ ಟೆಂಪಲ್ ರಸ್ತೆಯಲ್ಲಿರುವ ದೊಡ್ಡ ಗಣಪನಿಗೆ ವಿಶೇಷ ಕ್ಷೀರಾಭಿಷೇಕ, ಮೊಸರಿನ ಅಭಿಷೇಕ, ಪಂಚಾಮೃತಾಭಿಷೇಕಗಳನ್ನ ನೆರವೇರಿಸಲಾಯಿತು. ವಿಶೇಷ ಅಭಿಷೇಕ ಮತ್ತು ಅರ್ಚನೆ ಮತ್ತು ಮಹಾಮಂಗಳಾರತಿ ಬಳಿಕ ಅಭಿಮಾನಿಗಳು ಟಿವಿ9 ಸಂಸ್ಥಗೆ ಶುಭ ಹಾರೈಸಿ ದೇವಸ್ಥಾನದ ಆವರಣದಲ್ಲಿಯೇ ಕೇಕ್ ಕತ್ತರಿಸಿದ್ರು. ಭ್ರಷ್ಟಾಚಾರಿಗಳ ಪಾಲಿಗೆ ಸಿಂಹಸ್ವಪ್ನವಾಗಿರುವ ಟಿವಿ9 ಇನ್ನಷ್ಟು ಯಶಸ್ಸು ಕಾಣಲಿ ಅಂತ ಹಾರೈಸಿದ್ರು. ದೇವಸ್ಥಾನಕ್ಕೆ ಬಂದ ಭಕ್ತರಿಗೂ ಟಿವಿ9 ವಾರ್ಷಿಕೋತ್ಸವದ ಪ್ರಯುಕ್ತ ಅಭಿಮಾನಿಗಳು ಕೇಕ್ ಹಂಚಿ ಸಂಭ್ರಮಿಸಿದ್ರು.
ಟಿವಿ9 ಸುದ್ದಿವಾಹಿನಿಗೆ ಇವತ್ತು ಎಂಟನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ವಿಜಯಪುರ ನಗರದಲ್ಲಿ ಭೃಂಗಿಮಠ ಕಾನೂನು, ಸಾಮಾಜಿಕ ಕ್ರೀಯಾತ್ಮಕ ವೇದಿಕೆ ಹಾಗೂ ಕೆಎಸ್ಆರ್ಟಿಸಿ ಕನ್ನಡ ಕ್ರಿಯಾ ಸಮಿತಿ ವತಿಯಿಂದ ವಿಶೇಷವಾಗಿ ಸಂಭ್ರಮಾಚರಿಸಲಾಯ್ತು. ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಪ್ರಯಾಣಿಕರ ಮಧ್ಯೆ ಕೇಕ್ ಕತ್ತರಿಸಿ, ಕಾವ್ಯ-ಹಾಸ್ಯ ಗೋಷ್ಠಿ ನಡೆಸಲಾಯ್ತು. ಅಲ್ಲದೇ, ಭೃಂಗಿಮಠ ಕಾನೂನು ಹಾಗೂ ಸಾಮಾಜಿಕ ಕ್ರೀಯಾತ್ಮಕ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಮಲ್ಲಿಕಾರ್ಜುನ ಭೃಂಗಿಮಠ ಹಾಗೂ ಪ್ರಾಧ್ಯಾಪಕ ಸುಭಾಸ ಕಲ್ಲೂರ ಟಿವಿ 9 ಸುದ್ದಿ ವಾಹಿನಿಯ ಕುರಿತು ಸ್ವಕವನ ರಚನೆ ಮಾಡಿ ಕಾವ್ಯ ವಾಚಿಸಿದರು. ಇನ್ನು, ಕೆಎಸ್ಆರ್ಟಿಸಿ ಕ್ರಿಯಾ ಸಮಿತಿ ಅಧ್ಯಕ್ಷ ಚನ್ನವೀರ ಜಳಕಿ ಸೇರಿದಂತೆ ಈಶಾನ್ಯ ಸಾರಿಗೆ ಸಂಸ್ಥೆಯ ಸಿಬ್ಬಂದಿ ಹಾಗೂ ಇನ್ನಿತರರು ಟಿವಿ9 ಗೆ ಶುಭ ಕೋರಿದ್ರು.
Tags; TV9, Kannada, Anniversary, TV9 Anniversary, TV9 Kannada Anniversary, TV9 8th Anniversary, TV9 Kannada 8 Anniversary, Kannada News Channel Anniversary, 8 Anniversary of TV9, TV9 Birthday, TV9 Kannada Birthday..,