TV9 News: Karnataka Govt To Submit Objections Against 'Kasturirangan Report' To Central Govt...,
ರಾಜ್ಯದ ಮಲೆನಾಡಿಗರ ಪಾಲಿಗೆ ದುಸ್ವಪ್ನವಾಗಿ ಕಾಡ್ತಿರೋ ಕಸ್ತೂರಿ ರಂಗನ್ ವರದಿಯನ್ನ ವಿರೋಧಿಸಿ ಕೇಂದ್ರಕ್ಕೆ ವರದಿ ಸಲ್ಲಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ಸಂಪುಟ ಉಪ ಸಮಿತಿ ನೀಡಿರುವ ವರದಿಯಂತೆ, ಕಸ್ತೂರಿ ರಂಗನ್ ವರದಿ ಜಾರಿ ಮಾಡಲು ರಾಜ್ಯದ ವಿರೋಧವಿದೆ ಅನ್ನೊ ಶಿಫಾರಸ್ಸನ್ನು ಕೇಂದ್ರಕ್ಕೆ ಸಲ್ಲಿಸಲು ಇಂದಿನ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲು ಸಿಎಂ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ನಿರ್ಧರಿಸಿದೆ. ಬೆಳಗ್ಗೆ 11 ಗಂಟೆಗೆ ನಡೆಯುವ ಇಂದಿನ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ಮುಖ್ಯವಾಗಿ ಭದ್ರಾ ಮೇಲ್ದಂಡೆಯ ಅಂದಾಜು 12,340 ಕೋಟಿ ರೂಪಾಯಿ ಪರಿಷ್ಕೃತ ಯೋಜನೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಗಲಿದೆ. ಅಲ್ಲದೇ ಬಳ್ಳಾರಿ ನಾಲಾ ಯೋಜನೆಯ 635 ಕೋಟಿ ರೂಪಾಯಿಗಳ ಪರಿಷ್ಕೃತ ಯೋಜನೆ ಮತ್ತು ಮುಧೋಳ, ರಾಮದುರ್ಗ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ವೀರಭದ್ರೇಶ್ವರ ಏತ ನೀರಾವರಿ ಯೋಜನೆಯ 544 ಕೋಟಿ ವೆಚ್ಚದ ಪರಿಷ್ಕೃತ ಮೊತ್ತಕ್ಕೆ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆಯಲಿದೆ. ಅಲ್ಲದೇ, ಬಿಎಂಟಿಸಿಯಲ್ಲಿ ಆರ್ಥಿಕ ಹೊರೆಗೆ ಕಾರಣವಾಗಿರೋ 98 ಟಾಟಾ ಮಾರ್ಕೋಪೋಲೋ ಎಸಿ ಬಸ್ ಗಳನ್ನು ಅವಧಿಗೆ ಮುನ್ನವೇ ಸ್ಕ್ರ್ಯಾಫ್ ಮಾಡಲು ಇಂದಿನ ಸಂಪುಟ ಸಭೆ ಗ್ರೀನ್ ಸಿಗ್ನಲ್ ನೀಡಲಿದೆ. ಉಡುಪಿಯ ಕೋಟಿ ತಟ್ಟು ಪಡುಕೆರೆ ಎಂಬಲ್ಲಿ 2006 ರಲ್ಲಿ ನಡೆದಿದ್ದ ಹಿಂದು ಮುಸ್ಲಿಂ ಕೋಮುಗಲಭೆ ವೇಳೆ ದಾಖಲಾಗಿದ್ದ ಮೊಕದ್ದಮೆಯನ್ನು ವಾಪಸ್ ಪಡೆಯಲು ಮತ್ತು ನಾಗಮಂಗಲದ ಮಾಜಿ ಶಾಸಕ ಸುರೇಶ್ ಗೌಡ ಮೇಲಿನ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಕೈಬಿಡುವ ಕುರಿತು ಸಂಪುಟ ಸಭೆಯಲ್ಲಿ ತಿರ್ಮಾನವಾಗಲಿದೆ. ಮಂಡ್ಯದಲ್ಲಿ 2009 ರಲ್ಲಿ ಪೌರಕಾರ್ಮಿಕರು ನಡೆಸಿದ ಪ್ರತಿಭಟನೆಯ ಪೌರ ಕಾರ್ಮಿಕರ ಮೇಲೆ ಹಾಕಲಾಗಿದ್ದ ಕೇಸ್ ಹಿಂದಕ್ಕೆ ಪಡೆಯಲು ಇಂದಿನ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಗೋ ಸಾಧ್ಯತೆಯಿದೆ.