TV9 News: Bengaluru Police Raid Gambling Den, 20 Arrested, Cash, Other Items Seized.....,
ಬೆಂಗಳೂರಿನಲ್ಲಿ ಕಳೆದ ರಾತ್ರಿ ಶೇಷಾದ್ರಿಪುರಂ ಪೊಲೀಸ್ರು ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ 20ಕ್ಕೂ ಹೆಚ್ಚು ಜೂಜುಕೋರರನ್ನ ಬಂಧಿಸಿ, ಬಂಧಿತರಿಂದ 20 ಮೊಬೈಲ್, 2 ಲ್ಯಾಪ್ ಟಾಪ್ ಮತ್ತು 2 ಲಕ್ಷ ಹಣವನ್ನ ಜಪ್ತಿ ಮಾಡಿಕೊಂಡಿದ್ದಾರೆ. ಇನ್ನೂ ಮಂಗಳೂರು ಮೂಲದ ವ್ಯಕ್ತಿಯೊಬ್ಬ ಈ ರಾಕೆಟ್ಸ್ ಪೋಕರ್ ಎಂಬ ಪಬ್ ನಡೆಸುತ್ತಿದ್ದು, ಅದರಲ್ಲಿ ಅಕ್ರಮವಾಗಿ ಜೂಜು ನಡೆಸುತ್ತಿದ್ದ ಎನ್ನಲಾಗಿದೆ. ಕಳೆದ ಕೆಲ ತಿಂಗಳಿನಿಂದ ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸ್ರು ನಿನ್ನೆ ತಡರಾತ್ರಿ ದಾಳಿ ನಡೆಸಿದ್ದಾರೆ. ಇನ್ನ ಈ ಜೂಜು ಅಡ್ಡೆ ನಡೆಸಲು ರಾಜ್ಯದ ಪ್ರಭಾವಿ ರಾಜಕಾರಣಿಯೊಬ್ಬರ ಮಗ ಬೆಂಬಲಕ್ಕೆ ನಿಂತಿದ್ದಾರೆ ಎನ್ನುವ ಮಾಹಿತಿ ಕೇಳಿಬರುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಶೇಷಾದ್ರಿಪುರಂ ಪೊಲೀಸ್ರು ತನಿಖೆ ನಡೆಸುತ್ತಿದ್ದಾರೆ.