Karnataka Chief Minister Siddaramaiah has taken part in Zee Kannada Channel's popular show 'Weekend With Ramesh 3'. And C M Siddaramaiah Revealed Crow Story. For more information watch this video
ಕೆಲ ತಿಂಗಳಗಳ ಹಿಂದೆಯಷ್ಟೇ ಸಿಎಂ ಕಾರಿನ ಮೇಲೆ ಕಾಗೆಯೊಂದು ಕುಳಿತಿದ್ದು ಎಲ್ಲಿರಿಗೂ ಗೊತ್ತೇ ಇದೆ. ನಿನ್ನೆ ನಡೆದ ವೀಕೆಂಡ್ ಟೆಂಟ್‌ನಲ್ಲಿ ಈ ಕಾಗೆಯ ಕುರಿತು ಸಿಎಂ ಏನು ಹೇಳಿದ್ರು ಗೊತ್ತಾ?
ಸಿಎಂ ಅವರ ಮೌಢ್ಯ ವಿರೋಧಿ ನೀತಿ ಕುರಿತು ನಿರೂಪಕ ರಮೇಶ್ ಅರವಿಂದ್ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ನಾನು ಮೂಢನಂಬಿಕೆಗಳ ವಿರೋಧಿ. ಆದರೆ ಮನುಷ್ಯರನ್ನು ಪ್ರೀತಿಸುತ್ತೇನೆ. ಮನಷ್ಯರಲ್ಲಿ ಮಾನವೀಯತೆ ಹುಡುಕಲು ಪ್ರಯತ್ನಿಸುತ್ತೇನೆ. ಇತ್ತೀಚೆಗಷ್ಟೆ ನನ್ನ ಕಾರಿನ ಮೇಲೆ ಕಾಗೆ ಕುಳಿತಿದ್ದನ್ನು ಮಿಡಿಯಾಗಳು ದೊಡ್ಡ ಸುದ್ದಿ ಮಾಡಿದ್ವು. ಈ ಕುರಿತು ಚರ್ಚೆ ನಡೆಸಿದ್ರು.
ಆದರೆ ಇದರಿಂದ ಸಮಾಜಕ್ಕೆ ಏನು ಪ್ರಯೋಜನ ಆಯಿತು? ಅದೊಂದು ಕುರುಡು ಕಾಗೆಯಂತೆ. ಪಾಪ ದಾರಿ ಕಾಣದೆ ನನ್ನ ಕಾರಿನ ಮೇಲೆ ಕುಳಿತಿತ್ತು. ಇದಕ್ಕೆ ಸಿಎಂಗೆ ಶನಿ ಏರಿತ್ತು ಎಂದು ಹೇಳಿದ್ರು. ಇದೆಲ್ಲ ಸುಳ್ಳು ಎಂದ್ರು ಸಿಎಂ ಸಿದ್ದರಾಮಯ್ಯ.
ಇನ್ನು ಚಾಮರಾಜ ನಗರಕ್ಕೆ 11 ಬಾರಿ ಭೇಟಿ ನೀಡಿದೆ. ಆ ಮೂಲಕ ಅಲ್ಲಿ ಹೋದ ಸಿಎಂ ಅಧಿಕಾರ ಕಳೆದುಕೊಳ್ಳುತ್ತಾನೆ ಎನ್ನುವ ಮೂಢನಂಬಿಕೆ ಮುರಿದಿದ್ದೇನೆ ಎಂದ್ರು.