Traders and businessmen opposing to GST implementation. Here in the video is the photo feature about strike and protest against GST implementation with PTI photos. Watch this video.
ಜುಲೈ ಒಂದಕ್ಕೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜಾರಿಗೆ ಬರಲಿದೆ. ಇಡೀ ದೇಶದಲ್ಲಿ ಈ ಬಗ್ಗೆ ಕುತೂಹಲ ಇದೆ. ಜಾರಿಯಾದ ನಂತರ ಏನೆಲ್ಲ ಬದಲಾವಣೆಗಳು ಆಗಲಿವೆ, ಅಗತ್ಯ ವಸ್ತುಗಳ ಬೆಲೆಯಲ್ಲಿ ಯಾವ ರೀತಿ ಏರಿಳಿತ ಆಗಬಹುದು ಎಂಬ ಬಗ್ಗೆ ಜನರಲ್ಲಿ ಕಾತರ ಹಾಗೂ ನಿರೀಕ್ಷೆಗಳಿವೆ. ಈ ಮಧ್ಯೆ ಜಿಎಸ್ ಟಿ ಜಾರಿಗೆ ನಾನಾ ವ್ಯಾಪಾರ ವಲಯದಿಂದ ವಿರೋಧ ವ್ಯಕ್ತವಾಗುತ್ತಿದೆ. ಬೆಲೆ ಏರಿಕೆ ಆಗುತ್ತದೆ ಎಂಬುದು ಸೇರಿದಂತೆ ಏಕ ರೂಪ ತೆರಿಗೆಗೆ ಸರಕಾರ ತಂದಿರುವ ನಿಯಮಗಳ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ತಮ್ಮ ಅಸಮಾಧಾನವನ್ನು ತೋರಿಸಿಕೊಳ್ಳುವುದಕ್ಕೆ ಬಂದ್, ಪ್ರತಿಭಟನೆಗಳನ್ನು ಸಹ ಮಾಡುತ್ತಿದ್ದಾರೆ.