Kannada Actress Shubha Poonja has got new title 'Modaka thare' from director maagadi paandu.
ಶುಭಾ ಪೂಂಜಾ ಕನ್ನಡದ ಬಬ್ಲಿ ನಟಿ. ಶುಭಾ ಆಗಾಗ ಚಂದನವನದಲ್ಲಿ ಕಾಣಿಸಿಕೊಂಡು ಮತ್ತೆ ಹೇಳ ಹೆಸರಿಲ್ಲದಂತೆ ಮಾಯವಾಗುತ್ತಾಳೆ. ಆದರೆ ಶುಭಾ ಈಗ ಮತ್ತೆ ಸುದ್ದಿಯಾಗಿದ್ದಾಳೆ. ಯಾಕೆ ಗೊತ್ತಾ..?
ಶುಭಾಪೂಂಜಾ ‘ನರಗುಂದದ ಬಂಡಾಯ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾಳೆ. ಈಗಾಗಲೇ ಚಿತ್ರದ ಫೋಟೋ ಶೂಟ್ ಮುಗಿದಿದೆ. ಇನ್ನು ಶೂಟಿಂಗ್ ಪ್ರಾರಂಭಿಸಬೇಕು. ಈ ಸಿನಿಮಾಗಾಗಿ ಶುಭಾ ಬರೋಬ್ಬರಿ 16 ಕೆಜಿ ತೂಕ ಇಳಿಸಿಕೊಂಡಿದ್ದಾಳಂತೆ.
ಅಷ್ಟೇ ಅಲ್ಲದೇ, ‘ನರಗುಂದದ ಬಂಡಾಯ’ ಚಿತ್ರದ ನಿರ್ದೇಶಕ ಮಾಗಡಿ ಪಾಂಡು ಅವರಿಂದ ಹೊಸ ಬಿರುದನ್ನು ಪಡೆದುಕೊಂಡಿದ್ದಾಳೆ. ಸ್ಯಾಂಡಲ್ ವುಡ್ ಕ್ವೀನ್ ರಮ್ಯಾಗೆ ‘ಮೋಹಕ ತಾರೆ’ ಅಂತ ಕರಿತಾರೆ. ಹಾಗಾಗಿ ಶುಭಾ ಪೂಂಜಾಗೆ ‘ಮೋದಕ ತಾರೆ’ ಅಂತ ಬಿರುದು ನೀಡಿದ್ದಾರೆ.
ಶುಭಾ ಮೋದಕದಷ್ಟೇ ಸಿಹಿ ಅಂತೆ ಅದಕ್ಕೆ ಈ ಬಿರುದು ಅವರಿಗೆ ಸೂಟ್ ಆಗುತ್ತದೆ ಅಂತಾರೆ ಪಾಂಡು. ಈ ಚಿತ್ರದಲ್ಲಿ ಶುಭಾ ಪೂಂಜಾಗೆ ಜೋಡಿಯಾಗಿ ಪುಟ್ಟಗೌರಿ ಮದುವೆಯ ರಕ್ಷಿತ್ (ಮಹೇಶ್) ಅಭಿನಯಿಸುತ್ತಿದ್ದಾರೆ.