Sandalwood Actress Amulya and her husband Jagdeesh has taken part in Colors Super channel's popular show Super Talk Time.
ನಟಿ ಅಮೂಲ್ಯ ಮತ್ತು ಜಗದೀಶ್ ಅವರ ವಿವಾಹ ಕೆಲ ತಿಂಗಳುಗಳ ಹಿಂದೆಯಷ್ಟೇ ನಡೆದಿತ್ತು. ಈಗ ಮದುವೆಯ ಬಳಿಕ ಈ ಸೂಪರ್ ಜೋಡಿ ಕಿರುತೆರೆಯ ಒಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮಕ್ಕೆ ಅಮೂಲ್ಯ - ಜಗದೀಶ್ ಬಂದಿದ್ದಾರೆ. ಈಗಾಗಲೇ ಈ ಸಂಚಿಕೆಯ ಶೂಟಿಂಗ್ ನಡೆಯುತ್ತಿದ್ದು, ನಿರೂಪಕ ಅಕುಲ್ ಬಾಲಾಜಿ ಜೊತೆ ಈ ಜೋಡಿ ತೆಗೆದುಕೊಂಡಿರುವ ಫೋಟೋ ಈಗ ಹೊರ ಬಂದಿದೆ.