Bengaluru: CCTV Footage Shows Women Stealing Saree Bag In Commercial Street

Public TV 2017-07-14

Views 1

ಬೆಂಗಳೂರು: ನೋಡೋಕೆ ಸಖತ್ ಹೈಫೈ.. ಆದ್ರೆ ಮಾಡೋದೆಲ್ಲಾ ಖತರ್ನಾಕ್ ಕೆಲಸ... ಹೌದು, ಇದು ಸಿಸಿಟಿವಿಯಲ್ಲಿ ಸೆರೆಯಾದ ಹೈಫೈ ಕಳ್ಳಿಯರ ಕರಾಮತ್ತು. ನಿನ್ನೆ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್‍ನಲ್ಲಿ ನಡೆದ ಕಳ್ಳತನವೇ ಇದಕ್ಕೆ ಸಾಕ್ಷಿ. ಕಮರ್ಷಿಯಲ್ ಸ್ಟ್ರೀಟ್‍ನ ಓಲಿವ್ ಮಳಿಗೆಗೆ ಅಶ್ವಿನಿ ಎಂಬುವವರು ತಮ್ಮ ತಾಯಿಯೊಂದಿಗೆ ಶಾಪಿಂಗ್‍ಗೆ ತೆರಳಿದ್ದಾರೆ. ಈ ವೇಳೆ 35 ಸಾವಿರ ಮೌಲ್ಯದ ಸೀರೆ ಬ್ಯಾಗ್‍ ಅಲ್ಲಿಯೇ ಪಕ್ಕದಲ್ಲಿಟ್ಟಿದ್ದಾರೆ. ಈ ವೇಳೆ ಬಟ್ಟೆ ಖರೀದಿ ನೆಪದಲ್ಲಿ ಮಳಿಗೆಗೆ ಆಗಮಿಸಿದ ಇಬ್ಬರು ಕಳ್ಳಿಯರು, ಸ್ವಲ್ಪ ಕಾಲಹರಣ ಮಾಡಿ ಯಾರಿಗೂ ತಿಳಿಯದಂತೆ ಸೀರೆ ಬ್ಯಾಗನ್ನು ಕೊಂಡೊಯ್ದಿದ್ದಾರೆ. ಈ ಸಂಬಂಧ ಅಶ್ವಿನಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಕಳ್ಳಿಯರ ಕೈಚಳಕ ಬೆಳಕಿಗೆ ಬಂದಿದೆ.

Read detail news at www.publictv.in
Subscribe on YouTube: https://www.youtube.com/user/publictvnewskannada?sub_confirmation=1
Follow us on Google+ @ https://plus.google.com/+publictv
Like us @ https://www.facebook.com/publictv
Follow us on twitter @ https://twitter.com/PublicTVnews

Share This Video


Download

  
Report form