Government of India rejected Shanghai Fosun Pharmaceutical Group proposed $1.3 billion dollor takeover of an Indian drugmaker Gland Pharma. As per economic experts, this is new level of smart financial diplomatic attack on Chinese companies by any Indian government so far in the history.
ಸಿಕ್ಕಿಂ ಗಡಿ ವಿಚಾರದಲ್ಲಿ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನ ವಾತಾವರಣ ಮುಂದುವರಿದಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ, ಚೀನಾದ ಅತಿದೊಡ್ಡ ಔಷಧೀಯ ಕಂಪೆನಿಯ ಒಪ್ಪಂದಕ್ಕೆ ಬ್ರೇಕ್ ಹಾಕಿದ್ದಾರೆ. ಶಾಂಘೈ ಫೋಸನ್ ಫಾರ್ಮಾಸ್ಯೂಟಿಕಲ್ ಕಂಪೆನಿ ಲಿಮಿಟೆಡ್ ಸಂಸ್ಥೆ, ಭಾರತದ ಔಷಧೀಯ ಕಂಪೆನಿಯನ್ನು 1.3 ಬಿಲಿಯನ್ ಅಮೆರಿಕನ್ ಡಾಲರಿಗೆ (ಸುಮಾರು 8,328 ಕೋಟಿ ರೂಪಾಯಿ) ಖರೀದಿಸಲು ಮುಂದಾಗಿತ್ತು. ಈ ಒಪ್ಪಂದಕ್ಕೆ ಪ್ರಧಾನಿ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಮಿತಿ ಅನುಮತಿ ನಿರಾಕರಿಸುವ ಮೂಲಕ ಚೀನಾದ ಸಂಸ್ಥೆಗೆ ಬಹುದೊಡ್ಡ ಶಾಕ್ ನೀಡಿದೆ.