Renowned actor Prakash Raj has issued a clarification on his remark of returning his five National Awards in protest of journalist Gauri Lankesh's murder and Prime Minister Narendra Modi's subsequent silence on the tragedy. He also said that he is firm on his stand of criticizing Modi for not speaking a word against all those who are celebrating the murder of journalists like Lankesh.
ಬಹುಭಾಷಾ ನಟ ಪ್ರಕಾಶ್ ರೈ ಅವರ ಬಗ್ಗೆ ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ಗೊಂದಲದ ಸುದ್ದಿಯೊಂದನ್ನ ಪ್ರಸಾರ ಮಾಡಿದೆ. ಈ ಸುದ್ದಿ ನಿನ್ನೆ (ಅಕ್ಟೋಬರ್ 2) ರಾಷ್ಟ್ರ ಮಟ್ಟದಲ್ಲಿ ಸಂಚಲನ ಸೃಷ್ಠಿಸಿತ್ತು. ಈ ಸುದ್ದಿಯನ್ನ ನೋಡಿ ಸ್ವತಃ ಪ್ರಕಾಶ್ ರೈ ಅವರೇ ಒಂದು ಕ್ಷಣ ಆಶ್ಚರ್ಯವಾಗಿದ್ದಾರೆ. ಬೆಂಗಳೂರಿನಲ್ಲಿ ಆರಂಭವಾದ ಮೂರು ದಿನಗಳ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ ಐ)ನ 11ನೇ ರಾಜ್ಯ ಸಮ್ಮೇಳನ ಸಮಾರಂಭವನ್ನು ಉದ್ಘಾಟಿಸಿದ್ದ ಪ್ರಕಾಶ್ ರೈ, ಗೌರಿ ಲಂಕೇಶ್ ಅವರ ಹತ್ಯೆಯನ್ನ ಖಂಡಿಸಿ ಮಾತನಾಡಿದರು. ಈ ವೇಳೆ ತಪ್ಪಾಗಿ ಗ್ರಹಿಸಿಗೊಂಡ ಕೆಲವು ರಾಷ್ಟ್ರೀಯ ಮಾಧ್ಯಮಗಳು ಸುದ್ದಿಯಲ್ಲಿ ಗೊಂದಲ ಉಂಟು ಮಾಡಿ ಪ್ರಸಾರ ಮಾಡಿವೆ.