ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರೂಪಣೆ ಮಾಡಿಕೊಡಲಿರುವ ಕಾರ್ಯಕ್ರಮದ ಹೆಸರು ಫಿಕ್ಸ್ ಆಗಿದೆ. ಹಾಗೆ, ಪುನೀತ್ ಶೋನ ಎರಡನೇ ಪ್ರೋಮೋ ಕೂಡ ರಿಲೀಸ್ ಆಗಿದ್ದು, ಹೆಚ್ಚು ಆಕರ್ಷಣೆ ಮಾಡುತ್ತಿದೆ. ಪುನೀತ್ ನಡೆಸಿಕೊಡಲಿರುವ ಕಾರ್ಯಕ್ರಮ ಪಕ್ಕಾ ಫ್ಯಾಮಿಲಿ ಟಾಕ್ ಶೋ ಎಂದು ಹೇಳಲಾಗಿತ್ತು. ಅದಕ್ಕೆ ತಕ್ಕಂತೆ ಹೆಸರು ಕೂಡ ಇಡಲಾಗಿದ್ದು, ಪುನೀತ್ ಕಾರ್ಯಕ್ರಮಕ್ಕೆ 'ಫ್ಯಾಮಿಲಿ ಶೋ' ಎಂದು ನಾಮಕರಣ ಮಾಡಲಾಗಿದೆ.