ಕನ್ನಡದ ಹಿರಿಯ ನಟ ವೇಣುಗೋಪಾಲ್ ವಿಧಿವಶ | Oneindia Kannada

Oneindia Kannada 2017-10-25

Views 112

ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ನಟನಾಗಿ, ಖಳನಟನಾಗಿ ಅಭಿನಯಿಸಿದ್ದ ಹಿರಿಯ ಕಲಾವಿದ ವೇಣುಗೋಪಾಲ್ ವಿಧಿವಶರಾಗಿದ್ದಾರೆ. ಇಂದು ಬೆಳ್ಳಗೆ 8.30ರ ಸುಮಾರಿಗೆ ಕತ್ರಿಗುಪ್ಪೆಯ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ವೇಣುಗೋಪಾಲ್ ನಿಧನರಾಗಿದ್ದಾರೆ. ಐವತ್ತಕ್ಕೂ ಹೆಚ್ಚು ಸಿನಿಮಾ ಮಾಡಿದ್ದ ವೇಣುಗೋಪಾಲ್ ಅವರು ಕೊನೆಯದಾಗಿ 'ಶುದ್ದಿ' ಚಿತ್ರದಲ್ಲಿ ನಟಿಸಿದ್ದರು. ವೇಣುಗೋಪಾಲ್ ಅವರು 'ಸೂರಪ್ಪ', 'ರಾಜನರಸಿಂಹ', 'ಕೋಟಿಗೊಬ್ಬ' ಸೇರಿದಂತೆ ವಿಷ್ಣುವರ್ಧನ್ ಅವರ ಅನೇಕ ಚಿತ್ರಗಳಲ್ಲಿ ನಟಿಸಿದ ಖ್ಯಾತಿ ಹೊಂದಿದ್ದರು. ಸಿನಿಮಾದ ಜೊತೆಗೆ 'ಮನೆತನ', 'ಜನನಿ' ಸೇರಿದಂತೆ ಕೆಲ ಧಾರಾವಾಹಿಗಳಲ್ಲಿಯೂ ಕಾಣಿಸಿಕೊಂಡಿದ್ದರು. ವೇಣುಗೋಪಾಲ್ ಅವರ ಸಂಬಂಧಿಗಳು ದೂರದ ಉರಿನಿಂದ ಅಂತಿಮ ದರ್ಶನಕ್ಕಾಗಿ ಬರಬೇಕಾಗಿದ್ದು, ನಾಳೆ ಅಂತ್ಯಸಂಸ್ಕಾರವನ್ನು ಮಾಡಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ವೇಣುಗೋಪಾಲ್ ಅವರಿಗೆ ಪವನ್ ಮತ್ತು ಹೇಮಂತ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ವೇಣುಗೋಪಾಲ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಶಿಸುತ್ತೇವೆ

Share This Video


Download

  
Report form
RELATED VIDEOS