ಬಿಗ್ ಬಾಸ್ ಕನ್ನಡ ಸೀಸನ್ 5 : ಪ್ರಥಮ್ ಬರಬೇಕೆಂದು ವೀಕ್ಷಕರ ಒತ್ತಾಯ | filmibeat Kannada

Filmibeat Kannada 2017-10-26

Views 1.1K

ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ಮುಗಿದು ತಿಂಗಳುಗಳೇ ಉರುಳಿವೆ. 'ಬಿಗ್ ಬಾಸ್ ಕನ್ನಡ-5' ಶೋ ಈಗ ಶುರು ಆಗಿದೆ. ಹೀಗಿದ್ದರೂ, ಕಳೆದ ಆವೃತ್ತಿಯ 'ಬಿಗ್ ಬಾಸ್' ವಿನ್ನರ್ ಪ್ರಥಮ್ ನ ಮಾತ್ರ ಜನರು ಮರೆತಿಲ್ಲ..! ''ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಪ್ರಥಮ್ ಇರಬೇಕಿತ್ತು. ಪ್ರಥಮ್ ಇದ್ದಿದ್ರೆ, ಎಲ್ಲರಿಗೂ ಚೆನ್ನಾಗಿ ಬಿಸಿ ಮುಟ್ಟಿಸುತ್ತಿದ್ದ'' ಎಂದು ವೀಕ್ಷಕರೇ ಕಲರ್ಸ್ ಸೂಪರ್ ವಾಹಿನಿಯ ಫೇಸ್ ಬುಕ್ ಪುಟದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.ಈ ಬಾರಿ 'ಬಿಗ್ ಬಾಸ್' ಮನೆಯೊಳಗೆ ಜನಸಾಮಾನ್ಯರನ್ನ ಸೆಲೆಬ್ರಿಟಿ ಸ್ಪರ್ಧಿಗಳು ತಿರಸ್ಕಾರ ಭಾವನೆಯಿಂದ ನೋಡುತ್ತಿರುವ ಬಗ್ಗೆ ವೀಕ್ಷಕರಲ್ಲಿ ಬೇಸರ ಮೂಡಿದೆ. ಹೀಗಾಗಿ, ''ಸೇಲ್ಸ್ ಮ್ಯಾನ್' ದಿವಾಕರ್ ಜಾಗದಲ್ಲಿ ಪ್ರಥಮ್ ಇದ್ದಿದ್ರೆ, ಸಿಂಗಲ್ ಆಗಿ ಎಲ್ಲರ ನೀರಿಳಿಸ್ತಾಯಿದ್ದ.!'' ಎಂಬ ಟ್ರೋಲ್ ಗಳೇ ಹೆಚ್ಚಾಗಿವೆ.ಜನಸಾಮಾನ್ಯರು ತಪ್ಪು ಮಾಡದೇ ಇದ್ದರೂ, ಬಾಯಿಗೆ ಬಂದ ಹಾಗೆ ಮಾತನಾಡುತ್ತಿರುವ ಸೆಲೆಬ್ರಿಟಿ ಸ್ಪರ್ಧಿಗಳ ಬಗ್ಗೆ ವೀಕ್ಷಕರಲ್ಲಿ ಅಸಮಾಧಾನ ಮೂಡಿದೆ. ಅದಕ್ಕೆ ಸಾಕ್ಷಿ ಈ ಕಾಮೆಂಟ್.!

Bigg Boss Kannada 5: Week 2: Viewers are missing Pratham, Winner of Bigg Boss Kannada 4. Viewers says, Pratham had to be in the place of Diwakar. All the celebrities whould have shut their mouth. We want Pratham to be in Big House for one week.

Share This Video


Download

  
Report form
RELATED VIDEOS