ಧ್ರುವ ಸರ್ಜಾಗಾಗಿ ಕಥೆ ಬರೆಯುತ್ತಾರಂತೆ ಬಾಲಿವುಡ್ ಸ್ಟಾರ್ ರೈಟರ್ ಶಗುಫ್ತಾ ರಫೀಕ್! | Filmibeat Kannada

Filmibeat Kannada 2017-10-27

Views 143

ಮೊನ್ನೆ ಮೊನ್ನೆ ತಾನೇ ಧ್ರುವ ಸರ್ಜಾ ಅವರಿಗೆ ಅರ್ಜುನ್ ಸರ್ಜಾ ಒಂದು ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಇತ್ತು. ಇದರ ಹಿಂದೆಯೇ ಧ್ರುವ ಅವರ ಮತ್ತೊಂದು ಸಿನಿಮಾದ ಸುದ್ದಿ ಇದೀಗ ಕೇಳಿ ಬಂದಿದೆ. ಸದ್ಯ ಧ್ರುವ ಸರ್ಜಾ ಅವರ ಹೊಸ ಸಿನಿಮಾಗಾಗಿ ಬಾಲಿವುಡ್ ಸಿನಿಮಾ ಬರಹಗಾರತಿ ಶಗುಫ್ತಾ ರಫೀಕ್ ಕಥೆ ಬರೆಯಲಿದ್ದಾರಂತೆ. ಈ ಹಿಂದೆ ದರ್ಶನ್ ಅವರ 'ಜಗ್ಗುದಾದ' ಚಿತ್ರವನ್ನು ನಿರ್ದೇಶನ ಮಾಡಿದ್ದ ರಾಘವೇಂದ್ರ ಹೆಗ್ಡೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು, ತಮ್ಮ ಈ ಚಿತ್ರದ ಮೂಲಕ ಬಾಲಿವುಡ್ ರೈಟರ್ ಶಗುಫ್ತಾ ಅವರನ್ನು ಮೊದಲ ಬಾರಿಗೆ ಕನ್ನಡಕ್ಕೆ ಕರೆತರುವ ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ.'ಆಶಿಕಿ 2', 'ಹಮಾರಿ ಅಧೂರಿ ಕಹಾನಿ', 'ಮರ್ಡರ್ 2', ಜಿಸ್ಮ್ 2, ಸೇರಿದಂತೆ ಅನೇಕ ಚಿತ್ರಗಳಿಗೆ ಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಈಗಾಗಲೇ ತೆಲುಗಿನ ಒಂದು ಚಿತ್ರಕ್ಕೆ ಕಥೆ ಬರೆದಿರುವ ಇವರು ಇದೇ ಮೊದಲ ಬಾರಿಗೆ ಕನ್ನಡಕ್ಕೆ ಬರಲಿದ್ದಾರಂತೆ.'ಜಗ್ಗುದಾದಾ' ಖ್ಯಾತಿಯ ನಿರ್ದೇಶಕ ರಾಘವೇಂದ್ರ ಹೆಗ್ಡೆ ಈಗ ಧ್ರುವ ಸರ್ಜಾಗೆ ಒಂದು ಚಿತ್ರವನ್ನು ಮಾಡುವ ಪ್ಲಾನ್ ನಲ್ಲಿದ್ದು, ಈ ಚಿತ್ರದಲ್ಲಿ ಶಗುಫ್ತಾ ರಫೀಕ್ ಅವರ ಕಥೆ ಇರಲಿದೆಯಂತೆ.

Bollywood star writer Shagufta Rafik writes a story for druva surjan ,There was news that Arjun Sarja would make a film for Dhruv Sarja,and erliar Raghavendra Hegde, who has directed Darshan's 'Jagguda', he said the film will be directed by Bollywood writer Shaguftha.,watch this video

Share This Video


Download

  
Report form
RELATED VIDEOS