'ಕಳಪೆ' ಎಂದ ಕ್ಯಾಪ್ಟನ್ ಶ್ರುತಿ ಪ್ರಕಾಶ್ ವಿರುದ್ಧ ತಿರುಗಿ ಬಿದ್ದ ದಿವಾಕರ್.!ಬಿಗ್ ಬಾಸ್' ಮನೆಯಲ್ಲಿ ಕಾಮನ್ ಮ್ಯಾನ್ ದಿವಾಕರ್ ಜೊತೆ ದಿನಕ್ಕೊಬ್ಬರು ಗಲಾಟೆ ಮಾಡಿಕೊಳ್ಳುತ್ತಿದ್ದಾರೆ. ಸಿಹಿ ಕಹಿ ಚಂದ್ರು ಮತ್ತು ದಯಾಳ್ ನಂತರ ಈಗ ಶ್ರುತಿ ಪ್ರಕಾಶ್ ವಿರುದ್ದ ದಿವಾಕರ್ ತಿರುಗಿ ಬಿದ್ದಿದ್ದಾರೆ. ಈ ವಾರ ಕ್ಯಾಪ್ಟನ್ ಆಗಿರುವ ಶ್ರುತಿ ಪ್ರಕಾಶ್, ಇಡೀ ವಾರದ ಟಾಸ್ಕ್ ನಲ್ಲಿ 'ಕಳಪೆ' ಪ್ರದರ್ಶನ ನೀಡಿದ ಒಬ್ಬ ಸ್ಪರ್ಧಿಯ ಹೆಸರನ್ನು 'ಬಿಗ್ ಬಾಸ್'ಗೆ ಸೂಚಿಸಬೇಕಿತ್ತು. ಅದರಂತೆ, 'ಕಳಪೆ' ಆಟಗಾರನಾಗಿ ದಿವಾಕರ್ ಅವರ ಹೆಸರನ್ನು ಶ್ರುತಿ ತೆಗೆದುಕೊಂಡಿದ್ದಾರೆ. ಇದೇ ವಿಚಾರ ಇದೀಗ 'ಬಿಗ್ ಬಾಸ್' ಮನೆಯಲ್ಲಿ ದೊಡ್ಡ ಜಗಳಕ್ಕೆ ಕಾರಣವಾಗಿದೆ.ಕಳಪೆ ಆಟಗಾರನಾಗಿ ತನ್ನ ಹೆಸರು ತೆಗೆದುಕೊಂಡಿದ್ದಕ್ಕೆ ಶ್ರುತಿ ಪ್ರಕಾಶ್ ವಿರುದ್ಧ ದಿವಾಕರ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.ಕಳಪೆ ಬೋರ್ಡ್ ಹಾಕಿಕೊಳ್ಳುವುದಿಲ್ಲ ಅಂದ್ರು ದಿವಾಕರ್