ಬಿಗ್ ಬಾಸ್' ಬೆಡಗಿ ಶ್ರುತಿ ಪ್ರಕಾಶ್ ಗೆ ಬಾಯ್ ಫ್ರೆಂಡ್ ಇದ್ದಾರಾ.?'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಸ್ಪರ್ಧಿ ಆಗಿರುವ ಕನ್ನಡತಿ ಶ್ರುತಿ ಪ್ರಕಾಶ್ ಗೆ ಬಾಯ್ ಫ್ರೆಂಡ್ ಇದ್ದಾರಾ.? ಎಂಬ ಅನುಮಾನ ಅನೇಕರಲ್ಲಿ ಮೂಡಿರಬಹುದು. 'ಬಿಗ್ ಬಾಸ್' ಮನೆ ಸದಸ್ಯರಿಗೂ ಈ ಅನುಮಾನ ಮೂಡಿದ ಕಾರಣ, 'ಬಿಗ್ ಬಾಸ್' ಮನೆಯಲ್ಲಿಯೇ ಶ್ರುತಿ ಪ್ರಕಾಶ್ ಸ್ಪಷ್ಟನೆ ನೀಡಿದ್ದಾರೆ. ''ನಾನು ಸಿಂಗಲ್. ನನಗೆ ಬಾಯ್ ಫ್ರೆಂಡ್ ಇಲ್ಲ'' ಎನ್ನುವ ಮೂಲಕ ತಮ್ಮ ರಿಲೇಶನ್ ಶಿಪ್ ಸ್ಟೇಟಸ್ ನ ಶ್ರುತಿ ಪ್ರಕಾಶ್ ಬಿಟ್ಟು ಕೊಟ್ಟಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಂತೂ ಶ್ರುತಿ ಪ್ರಕಾಶ್ ಗೆ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ. ಅದರಲ್ಲೂ, ಇದೀಗ 'ನಾನು ಸಿಂಗಲ್' ಅಂತ ಶ್ರುತಿ ಪ್ರಕಾಶ್ ಹೇಳಿರುವುದರಿಂದ, ಫ್ಯಾನ್ ಫಾಲೋವಿಂಗ್ ಡಬಲ್ ಆಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಮುದ್ದು ಮುದ್ದಾಗಿರುವ ಶ್ರುತಿ ಪ್ರಕಾಶ್ 'ಬಿಗ್ ಬಾಸ್' ಗೆಲ್ಲಬೇಕು ಎಂಬುದು ಅನೇಕರ ಬಯಕೆ.