'ಬಾಹುಬಲಿ' ಚಿತ್ರದ ನಿರ್ಮಾಣ ಸಂಸ್ಥೆಯೊಂದಿಗೆ ಸೇರಿ ಸಂಜನಾ ಹೊಸ ಸಾಹಸ | filmibeat Kannada

Filmibeat Kannada 2017-10-29

Views 437

'ಬಾಹುಬಲಿ' ಚಿತ್ರದ ನಿರ್ಮಾಣ ಸಂಸ್ಥೆಯೊಂದಿಗೆ ಸೇರಿ ಸಂಜನಾ ಹೊಸ ಸಾಹಸ!ನಟಿ ಸಂಜನಾ ಈಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಸಂಜನಾ ಅವರ ಈ ಹೊಸ ಯೋಜನೆಗೆ 'ಬಾಹುಬಲಿ' ಚಿತ್ರ ನಿರ್ಮಾಣ ಸಂಸ್ಥೆ 'ಅರ್ಕಾ ಮೀಡಿಯಾ' ಸಾಥ್ ನೀಡಿದೆ.ಸಂಜನಾ ಸದ್ಯ ತೆಲುಗಿನಲ್ಲಿ ಒಂದು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. 'ಸ್ವರ್ಣ ಖಟ್ಗಂ' ಹೆಸರಿನಲ್ಲಿ ಬರುತ್ತಿರುವ ಈ ಧಾರಾವಾಹಿಯಲ್ಲಿ ಸಂಜನಾ ಮಹಾರಾಣಿ ಆಗಿದ್ದಾರೆ. ವಿಶೇಷ ಅಂದರೆ ಇದೇ ಮೊದಲ ಬಾರಿಗೆ ಸಂಜನಾ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. ಅದ್ದೂರಿ ವೆಚ್ಚದಲ್ಲಿ ಈ ಧಾರಾವಾಹಿ ನಿರ್ಮಾಣವಾಗುತ್ತಿದ್ದು, ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ನಡೆಯಲಿದೆಯಂತೆ.'ಬಾಹುಬಲಿ' ಚಿತ್ರದ ಅನೇಕ ತಂತ್ರಜ್ಞರು ಈ ಧಾರಾವಾಹಿಯಲ್ಲಿ ಕೆಲಸ ಮಾಡಿದ್ದಾರಂತೆ. ಸಿನಿಮಾಗಳಿಗೆ ಕಡಿಮೆ ಇರದ ರೀತಿ ಧಾರಾವಾಹಿಯನ್ನ್ನು ಚಿತ್ರೀಕರಣ ಮಾಡುವ ಪ್ಲಾನ್ ಇದೆಯಂತೆ. ಡಿಸೆಂಬರ್ ವೇಳೆಗೆ 'ಸ್ವರ್ಣ ಖಟ್ಗಂ' ಧಾರಾವಾಹಿ ಟಿವಿಯಲ್ಲಿ ಪ್ರಸಾರ ಆಗಲಿದೆ.
Sanjana's new adventure with the production of 'Bahubali' company.Sanjana is currently acting in swarna khadgam serial. she is the queen in the episode of "Swarna Khatgam". This is the first time that she is acting in serial. watch this video,
Many technicians of 'Bahubali' have worked in this series. As the plan is to shoot serialists less than movies. By December, 'Swarna Khatgam' will be broadcast on serial TV..watch this video

Share This Video


Download

  
Report form
RELATED VIDEOS