ನಿಶ್ಚಿತಾರ್ಥದ ಬಳಿಕ ಚಿರಂಜೀವಿ ಸರ್ಜಾ ಮುಂದಿನ ಸಿನಿಮಾ ಶುರು | Filmibeat Kannada

Filmibeat Kannada 2017-10-29

Views 322

ನಿಶ್ಚಿತಾರ್ಥದ ಬಳಿಕ ಚಿರಂಜೀವಿ ಸರ್ಜಾ ಮುಂದಿನ ಸಿನಿಮಾ ಶುರು,ನಟ ಚಿರಂಜೀವಿ ಸರ್ಜಾ ಇತ್ತೀಚಿಗಷ್ಟೆ ನಟಿ ಮೇಘನಾ ರಾಜ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡರು. ಈ ಖುಷಿಯೊಂದಿಗೆ ಚಿರು ಅವರ ಹೊಸ ಸಿನಿಮಾ ಕೂಡ ಶುರುವಾಗಿದೆ.ಚಿರಂಜೀವಿ ಸರ್ಜಾ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ತಮ್ಮ ಮುಂದಿನ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ಚಿರು ಮುಂದಿನ ಚಿತ್ರವನ್ನು 'ಆ ದಿನಗಳು' ಖ್ಯಾತಿಯ ನಿರ್ದೇಶಕ ಕೆ.ಎಂ.ಚೈತನ್ಯ ನಿರ್ದೇಶನ ಮಾಡಲಿದ್ದಾರೆ. ವಿಶೇಷ ಅಂದರೆ ಇದು ಚಿರು ಮತ್ತು ಕೆ.ಎಂ.ಚೈತನ್ಯ ಕಾಂಬಿನೇಶನ್ ನಲ್ಲಿ ಬರುತ್ತಿರುವ ಹ್ಯಾಟ್ರಿಕ್ ಚಿತ್ರವಾಗಿದೆ. ಈ ಹಿಂದೆ ಚೈತನ್ಯ ನಿರ್ದೇಶನ ಮಾಡಿದ್ದ 'ಆಕೆ' ಮತ್ತು 'ಆಟಗಾರ' ಸಿನಿಮಾದಲ್ಲಿ ಚಿರು ನಾಯಕನಾಗಿದ್ದರು.ಈ ಸಿನಿಮಾದ ಮತ್ತೊಂದು ಹೈಲೆಟ್ ಎಂದರೆ ಇದು ದ್ವಾರಕೀಶ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ 51ನೇ ಸಿನಿಮಾವಾಗಿದೆ. 'ಚೌಕ' ಸಿನಿಮಾದ ಸೂಪರ್ ಸಕ್ಸಸ್ ಬಳಿಕ ಹೊಸ ಚಿತ್ರಕ್ಕೆ ನಿರ್ಮಾಪಕ ಯೋಗೀಶ್ ದ್ವಾರಕೀಶ್ ಕೈ ಹಾಕಿದ್ದಾರೆ. ಅಲ್ಲದೆ ಚಿರಂಜೀವಿ ಸರ್ಜಾ ಅವರ 'ಆಟಗಾರ' ಚಿತ್ರ ಕೂಡ ದ್ವಾರಕೀಶ್ ಬ್ಯಾನರ್ ನಲ್ಲಿಯೇ ನಿರ್ಮಾಣವಾಗಿತ್ತು.
After engagement Chiranjeevi Sarja is started his next film.actor Chiranjeevi Sarja recently engaged with Meghna Raj,Chiranjeevi Sarja has also revealed his next film through his Twitter account.Special is a hat-trick film coming out in Chiru and KM Chaitanya Combination,Another highlight of the film is the 51st movie produced by Dwarakish banner...watch this video

Share This Video


Download

  
Report form
RELATED VIDEOS