ಮೋದಿ ಫೋಟೋ ಹಾಕಿ ಟ್ವಿಟ್ಟಿಗರಿಂದ ಸರಿಯಾಗಿ ಕಾಲೆಳೆಸಿಕೊಂಡ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಹಿರಿಯ ಮುಖಂಡರ ಫೋಟೋ ಹಾಕಿ, ಬಿಜೆಪಿಯ ಕಾಲೆಳೆಯಲು ಹೋದ ಕಾಂಗ್ರೆಸ್ ಅನ್ನು ಟ್ವಿಟ್ಟಿಗರು ಸರಿಯಾಗಿ ಲೇವಡಿ ಮಾಡುತ್ತಿದ್ದಾರೆ. ಮೋದಿ, ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್, ರಾಜನಾಥ್ ಸಿಂಗ್ ಅವರ ಮುಂದೆ ರಾಹುಲ್ ಗತ್ತಿನಿಂದ ಹಾದು ಹೋಗುತ್ತಿರುವ ಮತ್ತು ರಾಹುಲ್ ಜೊತೆ ಅಡ್ವಾಣಿ ಭಾವೋದ್ವೇಗಕ್ಕೆ ಒಳಗಾಗಿ ಕುಳಿತಿರುವಂತಹ ಭಂಗಿಯ ಫೋಟೋ ಹಾಕಿ, ' The Past and future' ಎಂದು ಅದಕ್ಕೆ ಟೈಟಲ್ ನೀಡಿ @IncIndia ಅಕೌಂಟಿನಿಂದ ಟ್ವೀಟ್ ಮಾಡಲಾಗಿತ್ತು. ಟ್ವಿಟ್ಟಿಗರಿಗೆ ಕಾಂಗ್ರೆಸ್ಸಿನ ಈ ಟ್ವೀಟ್ ಹಾಸ್ಯದ ವಸ್ತುವಂತಾಗಿ ವಿಧವಿಧವಾಗಿ ಅಣಕವಾಡಲು ಆರಂಭಿಸಿದ್ದಾರೆ. ಕಾಂಗ್ರೆಸ್ಸಿನ ಈ ಟ್ವೀಟಿಗೆ 411ಕ್ಕೂ ಹೆಚ್ಚು ಜನ ಪ್ರತಿಕ್ರಿಯಿಸಿದ್ದು, 970ಕ್ಕೂ ಹೆಚ್ಚು ಜನ ರಿಟ್ವೀಟ್ ಮಾಡಿದ್ದಾರೆ.
Past and future tweet by @IncIndia (official twitter handle of Congress) on Prime Minister Narendra Modi and BJP leaders becomes mockery subject for tweeters.