Jio Fi ಬಳಸಿ 2G ಮತ್ತು 3G ಗ್ರಾಹಕರು ಕಾಲ್ ಮಾಡುವುದು ಹೇಗೆ?

Gizbot 2017-11-02

Views 4

ಭಾರತದಲ್ಲಿ ತನ್ನ 4ಜಿ ಸೇವೆಯ ಮೂಲಕ ರಿಲಾಯನ್ಸ್ ಜಿಯೋ ಡಿಜಿಟಲ್ ಕ್ರಾಂತಿಯನ್ನು ಮಾಡಿದೆ. ಅಂತಹದ್ದರಲ್ಲಿ ಹಲವರಿಗೆ ರಿಲಾಯನ್ಸ್ ಜಿಯೋದಲ್ಲಿ ಕೆಲವು ಕಾರ್ಯಗಳನ್ನು ನಡೆಸಲು ಸಾಧ್ಯವೇ ಸಾಧ್ಯವಿಲ್ಲವೇ ಎಂಬುದಾಗಿ ಹಲವರ ಮೂನದಲ್ಲಿ ಮೂಡಬಹುದು. ಅದರಲ್ಲಿ ಒಂದು ಸಂದೇಹವಾಗಿದೆ 2ಜಿ ಅಥವಾ 3ಜಿ ಸ್ಮಾರ್ಟ್‌ಫೋನ್‌ಗಳನ್ನು ಜಿಯೋ ಹಾಟ್‌ಸ್ಪಾಟ್‌ಗೆ ಸಂಪರ್ಕವನ್ನು ಪಡೆದುಕೊಂಡು ಕರೆಮಾಡುವುದಾಗಿದೆ.ನಿಮ್ಮ 2ಜಿ ಅಥವಾ 3ಜಿ ಫೋನ್‌ನಲ್ಲಿ ಜಿಯೋ ಅಪ್ಲಿಕೇಶನ್ ಬಳಸಿಕೊಂಡು ಕರೆಗಳನ್ನು ಮಾಡುವುದು ಹೇಗೆ ಎಂಬುದನ್ನು ಕೆಲವು ಹಂತಗಳ ಮೂಲಕ ನೀಡುತ್ತಿದ್ದೇವೆ. ವೈಫೈ ಮೂಲಕ ಜಿಯೋ ಹಾಟ್‌ಸ್ಪಾಟ್‌ಗೆ ಸಂಪರ್ಕವನ್ನು ಪಡೆದುಕೊಂಡು ಕರೆಮಾಡುವುದಾಗಿದೆ.ಮೈಜಿಯೋ ಅಪ್ಲಿಕೇಶನ್‌ಗೆ ನೀವು ಅಗತ್ಯ ಅನುಮತಿಗಳನ್ನು ಒದಗಿಸಿದ ನಂತರ, ನಿಮ್ಮ ಕೆಲಸ ಮುಗಿದಂತೆಯೇ. 2ಜಿ ಅಥವಾ 3ಜಿ ಫೋನ್ ಬಳಸಿಕೊಂಡು ಜಿಯೋ ಅಪ್ಲಿಕೇಶನ್ ಉಪಯೋಗಿಸಿ ನಿಮಗೆ ಕರೆಗಳನ್ನು ಮಾಡಬಹುದಾಗಿದೆ. ನಿಮ್ಮ ಡಿವೈಸ್‌ನಲ್ಲಿ ಅಪ್ಲಿಕೇಶನ್ ತೆರೆಯಿರಿ ಮತ್ತು ವೆಲ್‌ಕಮ್ ಸ್ಕ್ರೀನ್‌ನಲ್ಲಿ ಡಯಲರ್‌ಗೆ ಮುಂದುವರಿಯಿರಿ.ವಾಯ್ಸ್ ಕರೆಗಳನ್ನು ಮಾಡುವುದಲ್ಲದೆ, ನಿಮ್ಮ 2ಜಿ ಅಥವಾ 3ಜಿ ಸ್ಮಾರ್ಟ್‌ಫೋನ್ ಬಳಸಿಕೊಂಡು ಜಿಯೋ ಜಾಯಿನ್ ಅಪ್ಲಿಕೇಶನ್‌ನೊಂದಿಗೆ ವೀಡಿಯೊ ಕರೆಗಳನ್ನು ಮಾಡಬಹುದಾಗಿದೆ.

Share This Video


Download

  
Report form
RELATED VIDEOS