ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ, ಸರ್ಕಾರಿ ಆಸ್ಪತ್ರೆಯೇ ದಿಕ್ಕು | Oneindia Kannada

Oneindia Kannada 2017-11-03

Views 696

ಕರ್ನಾಟಕ ಖಾಸಗಿ ವೈದ್ಯಕೀಯ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ ಖಾಸಗಿ ಆಸ್ಪತ್ರೆಯ ವೈದ್ಯರು ಮುಷ್ಕರಕ್ಕೆ ಇಳಿದಿದ್ದಾರೆ. ಕಳೆದ ಜುಲೈನಲ್ಲಿ ಮುಷ್ಕರಕ್ಕೆ ಇಳಿದಿದ್ದ ವೈದ್ಯರು ಈಗ ಮತ್ತೆ ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆ ಮಂಡಿಸಲು ಹೊರಟ ಸರ್ಕಾರದ ನಿರ್ಧಾರ ಖಂಡಿಸಿ ಪ್ರತಿಭಟನೆ ನಡೆಸಲಿದ್ದಾರೆ.ಬಾಗಲಕೋಟೆ ಜಿಲ್ಲೆಯಲ್ಲಿ 60ಕ್ಕೂ ಅಧಿಕ ಖಾಸಗಿ ಆಸ್ಪತ್ರೆಗಳು ಮುಚ್ಚಿವೆ, ಶಿವಮೊಗ್ಗದಲ್ಲಿ ನಂಜಪ್ಪ, ಮ್ಯಾಕ್ಸ್, ನಾರಾಯಣ ಆಸ್ಪತ್ರೆಗಳು ಬಂದ್ ಮಂಗಳೂರಿನಲ್ಲಿ ರೋಗಿಗಳನ್ನು ನೋಡಿಕೊಳ್ಳುತ್ತಿರುವ ನರ್ಸ್ ಗಳು ಬಾಗಲಕೋಟೆಯಲ್ಲಿ ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡಿದ ರೋಗಿಗಳು ವಿಜಯಪುರದಲ್ಲಿ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ, ಜಯನಗರದಲ್ಲಿ ಕ್ಲೌಡ್ ನೈನ್, ಅಪೋಲೋ, ರಾಮಕೃಷ್ಣ, ಪಾಲಿ ಕ್ಲಿನಿಕ್ ಗಳು, ಲ್ಯಾಬ್ ಗಳು ಬಾಗಿಲು ಬಂದ್ ಮಾಡಿವೆ. ಬನಶಂಕರಿಯಲ್ಲಿ ಬೆಳಗ್ಗೆ 7 ಗಂಟೆಗೆ ವಿನಾಯಕ ಆಸ್ಪತ್ರೆ, ಉದ್ಭವ ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದು, ಪರಿಸ್ಥಿತಿ ನೋಡಿಕೊಂಡು ಮುಷ್ಕರಕ್ಕೆ ಕೈಜೋಡಿಸುವುದಾಗಿ ಹೇಳಿದರು.
All private hospitals across Karnataka will be shut today on account of the doctors' strike. Private hospitals in Karnataka handle nearly 70 per cent of the outpatient cases.

Share This Video


Download

  
Report form
RELATED VIDEOS