Mufti, Kannada Movie trailer released Celebrities are Fidaa with the trailer Kannada Celebrities are appreciating Mufti Trailer. The movie features Shiva Rajkumar and Sriimurali.
'ಮಫ್ತಿ' ಟ್ರೈಲರ್ ಗೆ ಸ್ಟಾರ್ ನಟರು ಫಿದಾ.! ಯಾರು ಏನಂದ್ರು? ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಮಫ್ತಿ' ಟ್ರೈಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡ್ತಿದೆ. ಇದೇ ಮೊದಲ ಸಲ ಶಿವಣ್ಣ ಮತ್ತು ಶ್ರೀಮುರಳಿ ಒಟ್ಟಿಗೆ ಅಭಿನಯಿಸಿದ್ದು, ಈ ಇಬ್ಬರ ಜುಗಲ್ ಬಂದಿ ಕಂಡು ಸ್ಯಾಂಡಲ್ ವುಡ್ ಸ್ಟಾರ್ಸ್ ಫುಲ್ ಫಿದಾ ಆಗಿದ್ದಾರೆ. ಬಹುದೊಡ್ಡ ತಾರಬಳಗ ಹೊಂದಿರುವ ಈ ಚಿತ್ರದಲ್ಲಿ ಶಾನ್ವಿ ಶ್ರೀವಸ್ತವ್ ನಾಯಕಿ ಆಗಿ ಮಿಂಚಿದ್ದಾರೆ.'ಮಫ್ತಿ' ಟ್ರೈಲರ್ ನೋಡಿ ಖುಷಿಯಾಗಿರುವ ಚಿರಂಜೀವಿ ಸರ್ಜಾ ''ಟ್ರೈಲರ್ ನಲ್ಲಿ ಮೂಡಿ ಬಂದಿರುವ ಹಿನ್ನೆಲೆ ಧ್ವನಿಗೆ ಫುಲ್ ಫಿದಾ ಆಗಿದ್ದಾರೆ''.ಶ್ರೀಮುರಳಿ, ಶಾನ್ವಿ ಶ್ರೀವಸ್ತವ್ ಮತ್ತು ಶಿವಣ್ಣ ಅಭಿನಯದ 'ಮಫ್ತಿ' ಟ್ರೈಲರ್ ಗೆ ಡ್ಯಾನಿಶ್ ಸೇಠ್ ಬೋಲ್ಡ್ ಆಗಿದ್ದಾರೆ.