ಸೆಕ್ಸ್ ವಿಡಿಯೊ ಟೇಪ್ ನಿಂದ ವಿವಾದ ಮೈಮೇಲೆ ಎಳೆದುಕೊಂಡಿದ್ದ ಬಾಗಲಕೋಟೆ ಶಾಸಕ, ಮಾಜಿ ಸಚಿವ ಎಚ್.ವೈ.ಮೇಟಿ "ಈ ಭಾರಿಯೂ ನನಗೇ ಕಾಂಗ್ರೆಸ್ ಟಿಕೇಟ್ ಖಚಿತ, ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ' ಎಂದು ಅಬ್ಬರಿಸಿದ್ದಾರೆ.ಬಾಗಲಕೋಟೆ ಕ್ಷೇತ್ರಕ್ಕೆ ಈ ಬಾರಿ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ, ಮೇಟಿ ವಿರೋಧ ಬಣ ಪಕ್ಷದ ರಾಜ್ಯ ನಾಯಕರನ್ನು ಕಂಡು ಮೇಟಿ ಅವರಿಗೆ ಟಿಕೆಟ್ ತಪ್ಪಿಸಿದೆ ಎಂಬ ಊಹಾಪೋಹ ಬಾಗಲಕೋಟೆ ಗಲ್ಲಿಯಲ್ಲಿ ಹರಿದಾಡಲು ಆರಂಭವಾದ ಹಿನ್ನೆಲೆಯನ್ನು ಮೇಟಿ ತಾವೇ ಈ ಬಾರಿಯೂ ಕ್ಷೇತ್ರದಿಂದ ಗೆದ್ದು ಬರುವುದಾಗಿ ತಿಳಿಸಿದ್ದಾರೆ."ನನಗೇ ಟಿಕೇಟ್ ಕೊಡಿಸುವ ತಾಕತ್ತು ಇರುವಾಗ, ನನ್ನ ಟಿಕೇಟ್ ತಪ್ಪಿಸುವ ಛಾತಿ ಯಾರಿಗಿದೆ' ಎನ್ನುವ ಮೂಲಕ ತಮ್ಮ ವರ್ಚಸ್ಸು ಕಾಂಗ್ರೇಸ್ ಪಕ್ಷದಲ್ಲಿ ಇನ್ನೂ ಕುಗ್ಗಿಲ್ಲ ಅವರು ವಿರೋಧಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.