ಮತ್ತೆ ಯಶ್ ಯೋಗಿ ಗೆಳೆತನ ಆರಂಭ | FIlmibeat Kannada

Filmibeat Kannada 2017-11-04

Views 3

It took more than 5 years to rebuilt the friendship bridge between Yash and Yogi. Now these both actors turned into close friends again.

ಸ್ಯಾಂಡಲ್ ವುಡ್ ನಲ್ಲಿ ಕುಚುಕು ಗೆಳೆಯರಿಗೇನು ಕಡಿಮೆ ಇಲ್ಲ. ವಿಷ್ಣುವರ್ಧನ್-ಅಂಬರೀಶ್, ದರ್ಶನ್-ಸುದೀಪ್, ಶಿವರಾಜ್ ಕುಮಾರ್-ಉಪೇಂದ್ರ....ಹೀಗೆ ಆಲ್ ಟೈಂ ಫ್ರೆಂಡ್ಸ್ ಆಗಿ ಇರುವ ಸ್ಟಾರ್ ನಟ-ನಟಿಯರು ಚಂದನವನದಲ್ಲಿದ್ದಾರೆ. ಈ ದಿಗ್ಗಜರ ಸಾಲಿನಲ್ಲಿದ್ದ ಮತ್ತೊಂದು ಜೋಡಿ ಲೂಸ್ ಮಾದ ಯೋಗಿ ಮತ್ತು ರಾಕಿಂಗ್ ಸ್ಟಾರ್ ಯಶ್. ಇವರಿಬ್ಬರ ಸ್ನೇಹ ಎಷ್ಟರ ಮಟ್ಟಿಗೆ ಇತ್ತಂದ್ರೆ, ಯಶ್ ಚಿತ್ರೀಕರಣದಲ್ಲಿದ್ದಾಗ ಶೂಟಿಂಗ್ ಸೆಟ್ ಗೆ ಯೋಗಿ ಭೇಟಿಕೊಟ್ಟು ಟೈಂ ಪಾಸ್ ಮಾಡ್ತಿದ್ರು. ಯೋಗಿ ಶೂಟಿಂಗ್ ನಲ್ಲಿದ್ದಾಗ ಯಶ್ ಭೇಟಿ ಕೊಟ್ಟು ಟೈಂ ಪಾಸ್ ಮಾಡ್ತಿದ್ರು. ಇನ್ನು ಇಬ್ಬರಿಗೂ ಶೂಟಿಂಗ್ ಇಲ್ಲದ ಟೈಂನಲ್ಲಿ ಹೇಳೋದೆ ಬೇಡ ಬಿಡಿ. ಒಂದು ಕಾಲದಲ್ಲಿ ಹೀಗಿದ್ದ ಸ್ನೇಹಿತರು ಕೆಲ ವರ್ಷಗಳು ಕಳೆದಂತೆ ಇಬ್ಬರ ಸ್ನೇಹದಲ್ಲಿ ಬಿರುಕು ಬಿಟ್ಟಿತ್ತು.ಯಶ್ ಮತ್ತು ಯೋಗಿ ಇಬ್ಬರು ಒಂದೇ ಸಂದರ್ಭದಲ್ಲಿ ಅಂದ್ರೆ ಎರಡು ಮೂರು ವರ್ಷ ಅಂತರದಲ್ಲಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿಕೊಟ್ಟವರು. ಇಬ್ಬರು ಒಂದೇ ವಯಸ್ಸಿನವರು ಆಗಿರೋದ್ರಿಂದ ಇಬ್ಬರು ಒಳ್ಳೆ ಫ್ರೆಂಡ್ಸ್ ಆಗಿದ್ದರು. ಆದ್ರೆ ವರ್ಷಗಳು ಕಳೆದಂತೆ ಇಬ್ಬರಲ್ಲಿ ಮನಸ್ಥಾಪಗಳು ಹೆಚ್ಚಾಗುವುದಕ್ಕೆ ಪ್ರಾರಂಭ ಆಯ್ತು.

Share This Video


Download

  
Report form
RELATED VIDEOS