ಕೆ ಎಸ್ ಆರ್ ಟಿ ಸಿ ತನ್ನ ಪ್ರಯಾಣಿಕರಿಗಾಗಿ ತಂದಿದೆ ಬಸ್ ಮಿತ್ರ | Oneindia Kannada

Oneindia Kannada 2017-11-04

Views 1

The Karnataka State Road Transport Corporation (KSRTC) inducted 45 jeeps to be used for the rescue and relief during accidents. Transport Minister H.M.Revanna who operated a jeep to formally induct them.


ಕೆಎಸ್ಆರ್‌ಟಿಸಿ ಬಸ್ ಪ್ರಯಾಣಿಕರ ಸಹಾಯಕ್ಕಾಗಿ ಬಂತು 'ಬಸ್ ಮಿತ್ರ' ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ಸುಗಳು ಅಪಘಾತಕ್ಕೀಡಾದ ಸಂದರ್ಭದಲ್ಲಿ ಗಾಯಾಳುಗಳ ರಕ್ಷಣೆಗೆ ಹೊಸದಾಗಿ 'ಬಸ್ ಮಿತ್ರ' ವಾಹನಗಳನ್ನು ಪರಿಚಯಿಸಿದೆ. 3.52 ಕೋಟಿ ವೆಚ್ಚದಲ್ಲಿ 45 ವಾಹನಗಳನ್ನು ಖರೀದಿ ಮಾಡಲಾಗಿದೆ. ಕೆಎಸ್ಆರ್‌ಟಿಸಿಯ ಕೇಂದ್ರಿಯ 3ನೇ ಘಟಕದ ಆವರಣದಲ್ಲಿ ನಡೆದ ಸಮಾರಂಭದಲ್ಲಿ 45 ಬಸ್‌ ಮಿತ್ರ ವಾಹನಗಳಿಗೆ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಅವರು ಚಾಲನೆ ನೀಡಿದರು. 15 ವಿಭಾಗಗಳಿಗೆ 45 ವಾಹನಗಳನ್ನು ನಿಯೋಜನೆ ಮಾಡಲಾಗುತ್ತದೆ. 'ಆರೋಗ್ಯ ಇಲಾಖೆಯ ಆಂಬ್ಯುಲೆನ್ಸ್‌ಗಳು ಅಪಘಾತದ ಸ್ಥಳಕ್ಕೆ ತೆರಳಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಿವೆ. ನಿಗಮದಲ್ಲೂ ಪ್ರತ್ಯೇಕ ತಂಡವೊಂದು ಪ್ರಯಾಣಿಕರ ರಕ್ಷಣೆಗೆ ಕೆಲಸ ಮಾಡಲಿದೆ' ಎಂದು ಎಚ್.ಎಂ.ರೇವಣ್ಣ ಹೇಳಿದರು.ರಸ್ತೆ ಅಪಘಾತದಲ್ಲಿ ಗಾಯಗೊಂಡ ಪ್ರಯಾಣಿಕರಿಗೆ ತಕ್ಷಣದ ವೈದ್ಯಕೀಯ ನೆರವು ಒದಗಿಸಲು ಹಾಗೂ ಮರಣ ಹೊಂದಿದವರ ವಾರಸುದಾರರಿಗೆ ಪರಿಹಾರ ನೀಡುವ ಉದ್ದೇಶದಿಂದ 'ಕ.ರಾ.ರ.ಸಾ.ನಿಗಮ ಪ್ರಯಾಣಿಕರ ಅಪಘಾತ ಪರಿಹಾರ ನಿಧಿ ಟ್ರಸ್ಟ್' ನೋಂದಣಿ ಮಾಡಲಾಗಿದೆ ಎಂದು ಕೆಎಸ್ಆರ್‌ಟಿಸಿ ತಿಳಿಸಿದೆ.

Share This Video


Download

  
Report form
RELATED VIDEOS