ರಚಿತಾ ರಾಮ್ 'ಕಾಮಿಡಿ ಟಾಕೀಸ್' ಡಬ್ಬಾ, ಡುಬಾಕ್ ಪ್ರೋಗ್ರಾಂ ಅಂತೆ.! ಕಲರ್ಸ್ ಕನ್ನಡ ವಾಹಿನಿಯಲ್ಲಿ ಈಗ ಹೊಸ ಕಾರ್ಯಕ್ರಮ ಶುರುವಾಗಿದೆ. 'ಮಜಾ ಟಾಕೀಸ್' ಬಳಿಕ ಜನರನ್ನು ನಗಿಸುವುದಕ್ಕೆ 'ಕಾಮಿಡಿ ಟಾಕೀಸ್' ಬಂದಿದೆ.
ರಚಿತಾ ರಾಮ್ ಮತ್ತು ಸೃಜನ್ ಲೋಕೇಶ್ ಕಾರ್ಯಕ್ರಮದಲ್ಲಿದ್ದು, 'ಕಾಮಿಡಿ ಟಾಕೀಸ್' ಕಾರ್ಯಕ್ರಮದ ಮೊದಲ ಸಂಚಿಕೆ ಕಳೆದ ವಾರ ಪ್ರಸಾರ ಆಗಿದೆ. ಆದರೆ ಅದೇನೋ ಗೊತ್ತಿಲ್ಲ, ಈ ಕಾರ್ಯಕ್ರಮಕ್ಕೆ ಈಗ ಪಾಸಿಟಿವ್ ಗಿಂತ ನೆಗೆಟಿವ್ ಕಾಮೆಂಟ್ಸ್ ಗಳೇ ಹೆಚ್ಚಾಗಿವೆ.
ಕಾರ್ಯಕ್ರಮ ನೋಡುವವರು ಕಲರ್ಸ್ ಕನ್ನಡ ಫೇಸ್ ಬುಕ್ ಪೇಜ್ ನಲ್ಲಿ ಅವರ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ''ಕಾಮಿಡಿ ಟಾಕೀಸ್' ಕಾರ್ಯಕ್ರಮ 'ಮಜಾ ಭಾರತ' ಕಾರ್ಯಕ್ರಮದ ರೀತಿಯೇ ಇದೆ. ಅದು ಅದರ ರೀಮೇಕ್'' ಎನ್ನುವುದು ಸಾಕಷ್ಟು ವೀಕ್ಷಕರ ಅಭಿಪ್ರಾಯ.''ನಮಗೆ ನಗುವೇ ಬರುತ್ತಿಲ್ಲ.. ಇದು ಯಾವ ರೀತಿಯಾದ ಕಾಮಿಡಿ ಶೋ.. ಅವರಿಗೆ ಮೊದಲು ಒಳ್ಳೆಯ ಸ್ಕ್ರಿಪ್ಟ್ ಕೊಡಿ'' ಅಂತ ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ.
Viewers have taken their Facebook account to express there opinion about Colors Kannada channel's 'Comedy Talkies' program. Most of the viewers has sent negative comments about the program.