ಎಲ್ಲಾ ರೆಸ್ಟೋರೆಂಟ್ ಗಳ ಮೇಲಿನ ಜಿ ಎಸ್ ಟಿ 5% ಇಳಿಕೆ

Oneindia Kannada 2017-11-11

Views 995

Big announcements after GST council meet : The GST Council has decided to cut tax rate for restaurants to a flat 5 percent.This was decided at the 23 rd GST Council meeting held in Guwahati today

ರೆಸ್ಟೋರೆಂಟ್ ಗಳ ಜಿಎಸ್ಟಿ ಇಳಿಕೆ, ತಿಂಡಿ ಪೋತರಿಗೆ ಖುಷಿ! ಹಣಕಾಸು ಸಚಿವ ಅರುಣ್‌ ಜೈಟ್ಲಿ ನೇತೃತ್ವದಲ್ಲಿ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ, ಸರಿ ಸುಮಾರು 177ಕ್ಕೂ ಅಧಿಕ ವಸ್ತಗಳ ಮೇಲಿನ ಜಿಎಸ್ಟಿ ತೆರಿಗೆ ಹೊರೆ ಇಳಿಕೆ ಮಾಡಲಾಗಿದೆ. ಇದರಲ್ಲಿ ಪ್ರಮುಖವಾಗಿ ಎಲ್ಲಾ ರೆಸ್ಟೋರೆಂಟ್ ಮೇಲಿನ ಜಿಎಸ್ ಟಿಯನ್ನು ಶೇ5ಕ್ಕೆ ಮಿತಿಗೊಳಿಸಲಾಗಿದೆ.ಗುವಾಹತಿಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ನೇತೃತ್ವದಲ್ಲಿ 23ನೇ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಪ್ರಮುಖವಾಗಿಸಣ್ಣ ತೆರಿಗೆದಾರರನ್ನು ಗಮನದಲ್ಲಿಟ್ಟುಕೊಂಡು 177ಕ್ಕೂ ಹೆಚ್ಚು ವಸ್ತುಗಳ ಮೇಲಿನ ಜಿಎಸ್‌ಟಿ ದರ ಶೇ.28ರಿಂದ 18ಕ್ಕೆ ಕಡಿತಗೊಳಿಸಲಾಗಿದೆ.23ನೇ ಜಿಎಸ್ಟಿ ಸಭೆಯ ಪ್ರಮುಖ ನಿರ್ಣಯಗಳಲ್ಲಿ ರೆಸ್ಟೋರೆಂಟ್ ಮೇಲಿನ ತೆರಿಗೆಗೆ ಮಿತಿ ಇಳಿಕೆ ಮಾಡಲಾಗಿದೆ. ಎಲ್ಲಾ ರೆಸ್ಟೋರೆಂಟ್ ಗಳಿನ ಜಿಎಸ್ಟಿಯನ್ನು ಶೇ5ಕ್ಕೆ ಸೀಮಿತ ಮಾಡಲಾಗಿದೆ.ಇದು ಹವಾ ನಿಯಂತ್ರಿತ (ಎಸಿ) ಹಾಗೂ ನಾನ್ ಎಸಿ ರೆಸ್ಟೋರೆಂಟ್ ಗಳೆರಡಕ್ಕೂ ಅನ್ವಯವಾಗುತ್ತದೆ. ಆದರೆ, ಪಂಚತಾರಾ ಹೋಟೆಲ್ ಗಳಿಗೆ ಅನ್ವಯವಾಗುವುದಿಲ್ಲ.

Share This Video


Download

  
Report form
RELATED VIDEOS