ಕಾರ್ಯಕರ್ತರ ವಿರುದ್ಧ ಹರಿಹಾಯ್ದ ಬಿಎಸ್ ವೈ | Oneindia Kannada

Oneindia Kannada 2017-11-13

Views 214

ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಬಿಜೆಪಿ ಸೇರುವುದನ್ನು ವಿರೋಧಿಸಿ ಕೆಲ ಬಿಜೆಪಿ ಕಾರ್ಯಕರ್ತರಿಂದ ಬಹಿರಂಗ ಆಕ್ರೋಶ ವ್ಯಕ್ತವಾಯಿತು. ಹಾಲಾಡಿ ಬಣ ಮತ್ತುಮೂಲ ಬಿಜೆಪಿ ಬಣದ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಲಾಡಿ ವಿರೋಧಿಗಳ ವಿರುದ್ಧ ಕಿಡಿಕಾರಿದರು. "ಹಾಲಾಡಿಯೇ ನಮ್ಮ ನಾಯಕ, ಮುಂದಿನ ಶಾಸಕ, ಒಪ್ಪದವರು ಪಕ್ಷ ಬಿಟ್ಟು ಹೋಗಿ" ಎಂದು ಯಡಿಯೂರಪ್ಪ ವೇದಿಕೆಯಲ್ಲೇ ಹರಿಹಾಯ್ದರು. ಈ ಘಟನೆಯಿಂದಾಗಿ ಕೆಲಕಾಲ ಸಮಾವೇಶದಲ್ಲಿ ಗೊಂದಲದ ವಾತಾವರಣ ಏರ್ಪಟ್ಟಿತ್ತು. ಇದು ಪಕ್ಷದ ನಡುವೆಯೇ ಕಿರಿಕಿರಿಗೆ ದಾರಿ ಮಾಡಿಕೊಟ್ಟಿದೆ . ಇನ್ನು ಬರುವ ದಿನಗಳಲ್ಲಿ ಈ ವಿಷಯ ಹೇಗೆಲ್ಲ ತಿರುವು ಪಡೆದುಕೊಳ್ಳುತ್ತದೆ ಎಂದು ನಾವೆಲ್ಲರೂ ಕಾದು ನೋಡಬೇಕು. ಅದೇನೇ ಇದ್ದರು ಸ್ಥಳೀಯ ಹಾಲಾಡಿ ಬೆಂಬಲಿಗರು ಮಾತ್ರ ಬಿ ಎಸ ವೈಅವರನ್ನು ಹಾಡಿ ಹೊಗಳುತಿದ್ದಾರೆ .


B.S.Y takes stand against party people who doesn't want haladi srinivas shetty to join BJP.

Share This Video


Download

  
Report form
RELATED VIDEOS