ಅಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದ್ದರೆ, ಇಲ್ಲಿ ಅಂಬರೀಶ್ | Oneindia Kannada

Oneindia Kannada 2017-11-15

Views 2.9K

ದ್ಯಕ್ಕೆ ಅಂಬರೀಶ್ ಅವರು ಮಂಡ್ಯ ಜಿಲ್ಲಾ ರಾಜಕಾರಣದ ಕೇಂದ್ರಬಿಂದುವಾಗಿದ್ದಾರೆ. ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ರೆಬೆಲ್ ಸ್ಟಾರ್ ಮತ್ತೆ ಸಕ್ಕರೆ ನಗರಿಯ ಅಂಗಳದಲ್ಲಿ ಕಾಣಿಸಿಕೊಂಡಿದ್ದಾರೆ, ಹಲವಾರು ರಾಜಕಾರಣಿಗಳನ್ನು ಭೇಟಿಯಾಗುತ್ತಿದ್ದಾರೆ. ಮಂಡ್ಯ ವಿಧಾನಸಭೆಯನ್ನು ಪ್ರತಿನಿಧಿಸುವ ಅವರಿಗೆ, ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಅಲ್ಲಿ ಕೆಎಂಪಿಎ ತಿದ್ದುಪಡಿ ಕಾಯ್ದೆ ವಿರುದ್ಧ ವೈದ್ಯರ ಪ್ರತಿಭಟನೆ, ಮಾಜಿ ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣ, ಕನ್ನಡಪರ ಹೋರಾಟಗಾರರ ಪ್ರತಿಭಟನೆ, ಬಿಸಿಬಿಸಿ ಚರ್ಚೆ ನಡೆಯುತ್ತಿದ್ದರೂ ಅಂಬರೀಶ್ ಎಲ್ಲಿದ್ದಾರೆ? ಅಂಬರೀಶ್ ಅವರೊಬ್ಬರನ್ನೇ ಈ ಕುರಿತು ಪ್ರಶ್ನಿಸುವುದು ಸರಿಯಲ್ಲ, ಏಕೆಂದರೆ ಸದಸದಲ್ಲಿ ಇರುವುದು ಬೆರಳೆಣಿಕೆಯ ಸದಸ್ಯರಷ್ಟೇ. ಚಪ್ಪಾಳೆ ತಟ್ಟಲೂ ಯಾರೂ ಇಲ್ಲ, ಮೇಜು ಕುಟ್ಟಲು ಸದನದಲ್ಲಿ ಸಾಕಷ್ಟು ಕೈಗಳಿಲ್ಲ. ಹಲವರು ಪರಿವರ್ತನಾ ಯಾತ್ರೆಯಲ್ಲಿ, ವಿಕಾಸ ಯಾತ್ರೆಯಲ್ಲಿ, ಮತ್ತಿತರ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ.ಇಮ್ರಾನ್ ಸರ್ದಾರಿಯಾ ನಿರ್ದೇಶನದ, ಮಾಲಾಶ್ರೀ ಪ್ರಮುಖ ಭೂಮಿಕೆಯಲ್ಲಿರುವ, ನವೆಂಬರ್ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿರುವ 'ಉಪ್ಪು ಹುಳಿ ಖಾರ' ಕನ್ನಡ ಚಲನಚಿತ್ರದ ಪತ್ರಿಕಾಗೋಷ್ಠಿಯಲ್ಲಿ, ಮಂಡ್ಯದ ಜನಪ್ರತಿನಿಧಿ, ರೆಬೆಲ್ ಸ್ಟಾರ್ ಅಂಬರೀಶ್ ಅವರು ಡಾನ್ಸ್ ಮಾಡುತ್ತಿದ್ದರು.

Rebel star ambrish despite so many disputes and ongoing issues in the state is out there dancing with his prior co-actress.

Share This Video


Download

  
Report form
RELATED VIDEOS