Dr. Devi Prasad Shetty of Narayana Hrudayalaya, a renowned doctor, has responded to the government's KPME Act. "The government is threatening this way, and the young people are reluctant to come to the doctor's profession. We have to maintain the respect of the profession," he said.
ವೃತ್ತಿಯ ಗೌರವ, ಘನತೆ ಮಣ್ಣುಪಾಲಾಗುತ್ತಿದೆ : ದೇವಿಪ್ರಸಾದ್ ಶೆಟ್ಟಿ. 'ಕೆಪಿಎಂಇ' ಕಾಯ್ದೆ ಜಾರಿಗೆ ಸರಕಾರ ಪಟ್ಟಿ ಹಿಡಿದಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಖ್ಯಾತ ವೈದ್ಯ, ನಾರಾಯಣ ಹೃದಯಾಲಯದ ಡಾ. ದೇವಿಪ್ರಸಾದ್ ಶೆಟ್ಟಿ, "ಸರಕಾರ ಈ ರೀತಿ ಬೆದರಿಕೆ ಹಾಕುವುದರಿಂದ ವೈದ್ಯ ವೃತ್ತಿಗೆ ಬರುಲು ಯುವ ಜನಾಂಗ ಹಿಂದೇಟು ಹಾಕ್ತಾರೆ. ನಾವು ವೃತ್ತಿಯ ಗೌರವವನ್ನು ಕಾಪಾಡಬೇಕಾಗುತ್ತದೆ," ಎಂದು ಹೇಳಿದ್ದಾರೆ."ಸರಕಾರ ತಿದ್ದುಪಡಿ ತಂದು ಬಡವರಿಗೆ ಏನೋ ಸಹಾಯ ಮಾಡುತ್ತಿದ್ದೇವೆ ಎಂದು ಹೇಳುತ್ತಿದೆ. ಆದರೆ ನಾವು ಈ ಉದ್ಯಮದಿಂದ ಬಂದವರು. ನಮಗೆ ಇದು ಹೇಗೆ ಕೆಲಸ ಮಾಡುತ್ತಿದೆ ಎಂದು ಗೊತ್ತಿದೆ. ಈ ಕಾರಣಕ್ಕೆ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ," ಎಂದು ದೇವಿಪ್ರಸಾದ್ ಶೆಟ್ಟಿ 'ಒನ್ ಇಂಡಿಯಾ'ಗೆ ಪ್ರತಿಕ್ರಿಯೆ ನೀಡಿದ್ದಾರೆ."ಇಲ್ಲಿ ಉದ್ಯಮಕ್ಕೆ ಹೊಡೆತ ಬೀಳುತ್ತದೆ, ಲಾಭ ಕಡಿಮೆಯಾಗುತ್ತದೆ ಎಂಬ ಪ್ರಶ್ನೆ ಇಲ್ಲ. ವೃತ್ತಿಯ ಗೌರವಕ್ಕೆ ಧಕ್ಕೆಯಾಗುತ್ತಿದೆ. ಈ ಕಾರಣಕ್ಕೆ ವೈದ್ಯರೆಲ್ಲಾ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ರೀತಿ ಇಡೀ ದೇಶದಲ್ಲೇ ನಡೆದಿರುವ ಉದಾಹರಣೆ ಇಲ್ಲ," ಎಂದು ಅವರು ಹೇಳಿದ್ದಾರೆ.