Bigg Boss Kannada 5: Week 5: Jagan is upset with Anupama Gowda.
ಬ್ರೇಕಪ್ ವಿಚಾರವನ್ನ ಕ್ಯಾಮರಾ ಮುಂದೆ ಹೇಳಿದ ಅನುಪಮಾಗೆ ಜಗನ್ ಕ್ಲಾಸ್! ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಶುರು ಆದಾಗ, 'ಅಕ್ಕ' ಧಾರಾವಾಹಿ ಖ್ಯಾತಿಯ ಅನುಪಮಾ ಗೌಡ ಹಾಗೂ 'ಗಾಂಧಾರಿ' ಧಾರಾವಾಹಿ ಖ್ಯಾತಿಯ ಜಗನ್ನಾಥ್ ಚಂದ್ರಶೇಖರ್ 'ಮಾಜಿ ಪ್ರೇಮಿಗಳು' ಎಂಬ ಸಂಗತಿ ಕರುನಾಡ ಜನತೆಗೆ ಗೊತ್ತೇ ಇರಲಿಲ್ಲ. ಅದ್ಯಾವಾಗ, ಜಗನ್ ಮತ್ತು ಅನುಪಮಾ ಮಧ್ಯೆ ಶೀತಲ ಸಮರ ಶುರು ಆಯ್ತೋ... ಹಳೇ ನೆನಪುಗಳಿಗೆ ಜಾರಲು ಅನುಪಮಾ ಆರಂಭ ಮಾಡಿದ್ರೋ, ಹಳೆಯದ್ದನ್ನೆಲ್ಲ ಆಶಿತಾ ಕೆದಕಿದರೋ... ಆಗ, ಅನುಪಮಾ ಹಾಗೂ ಜಗನ್ 'ಹಳೇ ಲವರ್ಸ್' ಎಂಬ ಸಂಗತಿ ಬಯಲಾಯ್ತು.ಇನ್ನೂ, ತಮ್ಮ ಪ್ರೀತಿ ಮುರಿದು ಬಿದ್ದದ್ದು ಹೇಗೆ ಎಂಬುದರ ಬಗ್ಗೆಯೂ ನಟಿ ಅನುಪಮಾ ಗೌಡ 'ಬಿಗ್ ಬಾಸ್' ಮನೆಯಲ್ಲಿಯೇ ಹೇಳಿಕೊಂಡಿದ್ದಾರೆ. ತಮ್ಮ ಬ್ರೇಕಪ್ ಕಹಾನಿಯನ್ನ ಕ್ಯಾಮರಾ ಮುಂದೆ ಹೇಳಿದ ಅನುಪಮಾ ರವರ ವರ್ತನೆ ಜಗನ್ ಗೆ ಇಷ್ಟ ಆಗಿಲ್ಲ. ಎರಡು ವಾರಗಳ ಹಿಂದೆ ನಡೆದ ಈ ಘಟನೆಯನ್ನ ಇಟ್ಟುಕೊಂಡು ನಿನ್ನೆ 'ಬಿಗ್ ಬಾಸ್' ಮನೆಯಲ್ಲಿ ಅನುಪಮಾಗೆ ಜಗನ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು.