ಟೀಕೆ ಮಾಡುತ್ತಿದ್ದವರ ಬಾಯಿ ಮುಚ್ಚುವಂತೆ ಮಾಡಿದೆ ಮೂಡೀಸ್ ರೇಟಿಂಗ್ | Oneindia Kannada

Oneindia Kannada 2017-11-18

Views 3.4K

ಮೂಡೀಸ್ ರೇಟಿಂಗ್ ಕೇಂದ್ರಕ್ಕೆ ಹೊಸ ಚೈತನ್ಯ ತುಂಬಿದಂತಿದೆ. ನೋಟ್ ಬ್ಯಾನ್, ಜಿ.ಎಸ್.ಟಿ ಅನ್ನು ವಿಷಯವಾಗಿರಿಸಿಕೊಂಡು ಕೇಂದ್ರವನ್ನು ಟೀಕೆ ಮಾಡುತ್ತಿದ್ದವರ ಬಾಯಿ ಮುಚ್ಚುವಂತೆ ಮಾಡಿದೆ ಮೂಡೀಸ್ ರೇಟಿಂಗ್. ಮೂಡಿಸ್ ರೇಟಿಂಗ್ ಸಿಕ್ಕಿದ್ದರಿಂದ ಉತ್ಸಾಹ ಹೆಚ್ಚಿಸಿಕೊಂಡಿರುವ ಕೇಂದ್ರ ಸರ್ಕಾರ ಹಣಕಾಸು ಇಲಾಖೆ. ಈಗ ಮತ್ತೊಂದು ದಿಟ್ಟ ಹೆಜ್ಜೆ ಇಡಲು ಹೊರಟಿದೆ. ಅಂದು ಕೊಂಡತೆ ನಡೆದರೆ ಹಣಕಾಸು ವ್ಯವಹಾರ ಹೆಚ್ಚು ಪಾರದರ್ಶಕವಾಗಿ ತೆರಿಗೆ ಸೋರಿಕೆ ಗಣನೀಯವಾಗಿ ಕಡಿಮೆಯಾಗಲಿದೆ. ನೂರು ಕೋಟಿ ಆಧಾರ್ ಕಾರ್ಡ್ಗಳನ್ನು ನೂರು ಕೋಟಿ ಬ್ಯಾಂಕ್ ಖಾತೆ ಮತ್ತು ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಮಾಡುವ ಗುರಿ ನಿಗದಿಪಡಿಸಿಕೊಂಡಿದೆ. ಈ ಗುರಿ ಈಡೇರಿದರೆ ಚಲಾವಣೆಯಲ್ಲಿರುವ 6 ಲಕ್ಷ ಕೋಟಿಯಷ್ಟು ಹೆಚ್ಚಿನ ಮೌಲ್ಯದ ನೋಟುಗಳ ಸಂಖ್ಯೆ ಕಡಿಮೆಯಾಗುತ್ತದೆ ಹಾಗೂ ಡಿಜಿಟಲ್ ವ್ಯವಹಾರಕ್ಕೆ ಭಾರಿ ಉತ್ತೇಜನ ಸಿಗುತ್ತದೆ.

It's time for Modi to shut people who were criticizing his government for note ban and GST and calling them blunders.

Share This Video


Download

  
Report form