ಸುದೀಪ್ ಈ ಚಿತ್ರಕ್ಕೆ ಬೇಕೇ ಬೇಕು ಎಂದು ಆ ನಿರ್ದೇಶಕ ಪಟ್ಟು ಹಿಡಿದಿದ್ದೇಕೆ? | Filmibeat Kannada

Filmibeat Kannada 2017-11-18

Views 447

ಕೆಲವು ನಿರ್ದೇಶಕರು ಸಿನಿಮಾ ಕಥೆ ಮಾಡಿ ಈ ಕಥಗೆ ಈ ನಾಯಕ ಸೂಕ್ತವಾಗಬಹುದು ಎಂದು ಆಯ್ಕೆ ಮಾಡುತ್ತಾರೆ. ಮತ್ತೆ ಕೆಲವರು ಈ ನಾಯಕನಿಗಾಗಿಯೇ ಕಥೆ ಮಾಡಿ ಸಿನಿಮಾ ಮಾಡ್ತಾರೆ. ಅದು ಹಲವರು ಬಾರಿ ಸಾಬೀತಾಗಿದೆ. ಇದೀಗ, ತೆಲುಗಿನ ಖ್ಯಾತ ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಿರುವ ದುಬಾರಿ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಕನ್ನಡದ ಕಿಚ್ಚ ಸುದೀಪ್ ಅವರು ಬೇಕೇ ಬೇಕು ಎಂದು ಪಟ್ಟು ಹಿಡಿದು ಒಪ್ಪಿಸಿದ್ದಾರೆ. ಈ ಚಿತ್ರಕ್ಕೆ ಸುದೀಪ್ ಆರಂಭದಲ್ಲಿ ಒಪ್ಪಿಗೆ ಸೂಚಿಸಲು ಹಿಂದೇಟು ಹಾಕಿದ್ದರು. ಆದ್ರೆ, ನಿರ್ದೇಶಕರ ಬೇಡಿಕೆ ಮತ್ತು ಒತ್ತಾಯಕ್ಕೆ ಮಣಿದು ಕಿಚ್ಚ ಗ್ರೀನ್ ಸಿಗ್ನಲ್ ಕೊಡಬೇಕಾಯಿತು ಎನ್ನುವುದು ಗಾಂಧಿನಗರದ ಮಾತು. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸುತ್ತಿರುವ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಅಭಿನಯಿಸಲು ಸುದೀಪ್ ಅವರಿಗೆ ಅವಕಾಶ ಬಂದಿತ್ತು. ಆದ್ರೆ, ಅತಿ ಹೆಚ್ಚು ದಿನಗಳ ಕಾಲ ಕಾಲ್ ಶೀಟ್ ಕೊಡಬೇಕು ಎಂಬ ಕಾರಣದಿಂದ ಸುದೀಪ್ ಈ ಅವಕಾಶವನ್ನ ಬೇಡವೆಂದಿದ್ದರಂತೆ. ಹೀಗಾಗಿ, ಚಿರು ಚಿತ್ರವನ್ನ ಸುದೀಪ್ ರಿಜೆಕ್ಟ್ ಮಾಡಿದರು ಎಂಬ ಸುದ್ದಿಯಾಯಿತು.ಸುದೀಪ್ ಅವರೇ ಈ ಚಿತ್ರವನ್ನ ಕೈಬಿಡಲು ನಿರ್ಧರಿಸಿ ಬಿಟ್ಟಿದ್ದರು. ಆದ್ರೆ, ಆ ಚಿತ್ರದ ನಿರ್ದೇಶಕ ಸುರೇಂದರ್ ರೆಡ್ಡಿ ಅವರು ಕಿಚ್ಚನನ್ನ ಬಿಡಲಿಲ್ಲ. ''ಈ ಪಾತ್ರವನ್ನು ನೀವು ಮಾಡಲೇ ಬೇಕು. ನೀವು ನಮ್ಮ ಸಿನಿಮಾದಲ್ಲಿದ್ದರೇ ಚೆಂದ. ನೀವು ಬಿಟ್ಟರೇ ಈ ಪಾತ್ರವನ್ನು ಬೇರೆ ಯಾರಿಂದಲೂ ಮಾಡಲು ಸಾದ್ಯವಿಲ್ಲ'' ಎಂದು ಸುರೇಂದ್ರ ರೆಡ್ಡಿ ಪಟ್ಟು ಹಿಡಿದರಂತೆ.


Kiccha sudeep always respects his loved ones, if he is needed means he will be there no matter what the commitment is he will be the assistant of friendship and love,. watch this video

Share This Video


Download

  
Report form
RELATED VIDEOS