ರಾಜಮೌಳಿ ಫೋಟೋಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ ರಾಮ್ ಗೋಪಾಲ್ ವರ್ಮಾ | Filmibeat Kannada

Filmibeat Kannada 2017-11-20

Views 635

Ram Gopal Varma trolls Ram Charan, Jr NTR and SS Rajamouli for promoting 'gay culture'.


ರಾಜಮೌಳಿ, ಎನ್.ಟಿ.ಆರ್ ಪೋಸ್ಟ್ ಗೆ ಅತಿ ಕೆಟ್ಟ ಕಾಮೆಂಟ್ ಮಾಡಿದ ವರ್ಮ! ಭಾರತದ ಚಿತ್ರರಂಗದ ವಿವಾದ್ಮತಕ ನಿರ್ದೇಶಕ ರಾಮ್ ಗೋಪಾಲ್ ವರ್ಮ ಟ್ವಿಟ್ಟರ್ ನಿಂದ ಹೊರ ಹೋಗಿದ್ದಾಗ ಎಲ್ಲರೂ ಖುಷಿಯಾಗಿದ್ದರು. ಆದ್ರೆ, ವರ್ಮ ಟ್ವಿಟ್ಟರ್ ಬಿಟ್ಟ ಮೇಲೆ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಳೇ ಚಾಳಿಯನ್ನ ಮುಂದುವರಿಸಿದ್ದಾರೆ. ಇತ್ತೀಚೆಗೆ 'ಬಾಹುಬಲಿ' ನಿರ್ದೇಶಕ ರಾಜಮೌಳಿ ತಮ್ಮ ಟ್ವಿಟ್ಟರ್ ನಲ್ಲಿ ಒಂದು ಫೋಟೋ ಹಾಕಿದ್ದರು. ರಾಜಮೌಳಿ, ಜೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ಮೂವರು ಈ ಫೋಟೋದಲ್ಲಿ ಆತ್ಮೀಯವಾಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ನೋಡಿ ತೆಲುಗು ಚಿತ್ರರಂಗದಲ್ಲಿ ಕುತೂಹಲ ಗರಿಗೆದರಿದೆ. ಆದ್ರೆ, ರಾಮ್ ಗೋಪಾಲ್ ವರ್ಮ ಮಾತ್ರ ತಮ್ಮ ವರಸೆ ತೋರಿಸಿದ್ದಾರೆ. ಈ ಬ್ಯೂಟಿಫುಲ್ ಫೋಟೋಗೆ ಅತಿ ಕೆಟ್ಟದಾಗಿ ಕಾಮೆಂಟ್ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ನಿರ್ದೇಶಕ ರಾಜಮೌಳಿ ಹಾಕಿದ್ದು ಇದೇ ಫೋಟೋ. ರಾಮ್ ಚರಣ್, ಎನ್.ಟಿ.ಆರ್ ಮತ್ತು ರಾಜಮೌಳಿ ಒಟ್ಟಿಗೆ ಇರುವ ಫೋಟೋ ಹಾಕಿ, ಅದಕ್ಕೆ ಯಾವುದೇ ಕ್ಯಾಪ್ಷನ್ ಕೊಡದೆ ಬರಿ ಚುಕ್ಕಿಗಳನ್ನ ಇಟ್ಟಿದ್ದಾರೆ. ಇದು ಸಹಜವಾಗಿ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

Share This Video


Download

  
Report form
RELATED VIDEOS