Bigg Boss Kannada 5: ಸಿಹಿ ಕಹಿ ಚಂದ್ರು ಅಸಲಿಯತ್ತು ಬಟಾಬಯಲು ಮಾಡಿದ ಕೃಷಿ ತಾಪಂಡ | Filmibeat Kannada

Filmibeat Kannada 2017-11-20

Views 2.9K

ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಸಿಹಿ ಕಹಿ ಚಂದ್ರು ಅತಿ ಹಿರಿಯ ಸ್ಪರ್ಧಿ. ಇದೇ ಕಾರಣಕ್ಕೆ ಸಿಹಿ ಕಹಿ ಚಂದ್ರು ಕಂಡ್ರೆ ಎಲ್ಲರಿಗೂ ಗೌರವ. ರುಚಿ ರುಚಿಯಾದ ಅಡುಗೆ ಮಾಡಿ ಕೊಡುವ ಸಿಹಿ ಕಹಿ ಚಂದ್ರು ರವರ ಮಾತನ್ನ ಯಾರೂ ಅಲ್ಲಗೆಳೆಯುವುದೂ ಇಲ್ಲ. 'ಬಿಗ್ ಬಾಸ್' ಮನೆಯಲ್ಲಿ ಯಾವುದೇ ವಿವಾದಗಳಿಗೆ ಸಿಲುಕದೆ ಸೇಫ್ ಆಗಿ ಆಡುತ್ತಿರುವ ಸಿಹಿ ಕಹಿ ಚಂದ್ರು ರವರ ಅಸಲಿಯತ್ತನ್ನ ಎಲಿಮಿನೇಟ್ ಅದ ಸ್ಪರ್ಧಿ ಕೃಷಿ ತಾಪಂಡ ಬಯಲು ಮಾಡಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿ ಹಾಲು ಮುಚ್ಚಿಟ್ಟು, ಸಮೀರಾಚಾರ್ಯ ರವರಿಗೆ ಒಂದು ಲೋಟ ಹಾಲು ಕೊಡದ ವಿಚಾರ ದೊಡ್ಡ ವಿವಾದ ಆಗಿದ್ದು ನಿಮಗೆಲ್ಲ ಗೊತ್ತಿರಲೇಬೇಕು. ಅಂದು ''ಹಾಲು ಮುಚ್ಚಿಟ್ಟ ಸಂಗತಿ ಗೊತ್ತೇ ಇರಲಿಲ್ಲ'' ಎಂದು ಸುದೀಪ್ ಮುಂದೆ ಸಿಹಿ ಕಹಿ ಚಂದ್ರು ಹೇಳಿದ್ದರು. ಆದ್ರೆ, ''ಹಾಲು ಮುಚ್ಚಿಡುವ ಪ್ಲಾನ್ ನಲ್ಲಿ ಸಿಹಿ ಕಹಿ ಚಂದ್ರು ಇದ್ದರು'' ಎಂಬ ಸತ್ಯವನ್ನ ಇಂದು ಕೃಷಿ ತಾಪಂಡ ಹೊರ ಹಾಕಿದ್ದಾರೆ.ಇನ್ನೂ ಅಡುಗೆ ಮನೆಯಲ್ಲಿ ಬಿದ್ದಿದ್ದ ಈರುಳ್ಳಿ ಸಿಪ್ಪೆಯಿಂದಾಗಿ, ಮಾಡದ ತಪ್ಪಿಗೆ ಸಮೀರಾಚಾರ್ಯ, ಕೃಷಿ ತಾಪಂಡ ರಿಂದ ಬೈಯ್ಯಿಸಿಕೊಂಡರು. ಅದು ತಪ್ಪು ತಮ್ಮದಾಗಿದ್ದರೂ, ಅದನ್ನ ಒಪ್ಪಿಕೊಳ್ಳದೆ ಸಮೀರಾಚಾರ್ಯ-ಕೃಷಿ ವಾಕ್ಸಮರವನ್ನ ಸೈಲೆಂಟ್ ಆಗಿ ಸಿಹಿ ಕಹಿ ಚಂದ್ರು ನೋಡುತ್ತಿದ್ದರು.

big boss season 05 : big boss is a one of the big reality show in colors super,Sihi kahi chandru's true face revealed by krishi thapanda. watch this video

Share This Video


Download

  
Report form
RELATED VIDEOS