ಲಿಂಗಾಯತ ಧರ್ಮೀಯರ ರಾಷ್ಟ್ರೀಯ ಸಮಾವೇಶ , 5 ನಿರ್ಣಯಗಳು | Oneindia Kannada

Oneindia Kannada 2017-11-20

Views 109

ಬೆಂಗಳೂರು, ನವೆಂಬರ್ 20 : 'ವೀರಶೈವರು ನಮ್ಮ ತಂಟೆಗೆ ಬರದಿದ್ದರೆ ಒಳ್ಳೇದು. ನಮ್ಮ ಬಾಳೇವು ನಾವು ಮಾಡಿಕೊಳ್ತೇವೆ. ಸುಮ್ಮನೆ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ. ಯಾಕೆ ನಮ್ಮನ್ನೂ ಜೊತೆಗೆ ಕಟ್ಟಿಕೊಂಡು ಬೀಳ್ತಿರಿ' ಎಂದು ಸಚಿವ ವಿಜಯ ಕುಲಕರ್ಣಿ ಹೇಳಿದರು.ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಭಾನುವಾರ ಲಿಂಗಾಯತ ಧರ್ಮೀಯರ ರಾಷ್ಟ್ರೀಯ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಐದು ನಿರ್ಣಯಗಳನ್ನು ಮಂಡನೆ ಮಾಡಲಾಯಿತು. ಸಮಾವೇಶದಲ್ಲಿ ಮಾತನಾಡಿದ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, 'ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ನಡೆಸುತ್ತಿರುವ ಲಿಂಗಾಯತ ಚಳವಳಿಯ ನಾಯಕತ್ವ ವಹಿಸಿಕೊಳ್ಳಲು ಬಿಜೆಪಿ ಮುಖಂಡರಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮುಂದೆ ಬಂದರೆ ಬಿಟ್ಟುಕೊಡಲು ಸಿದ್ಧ' ಎಂದರು.ಸಮಾವೇಶದಲ್ಲಿ ಪಾಲ್ಗೊಂಡಿದ್ದ ನಟ ಚೇತನ್, 'ನಾವು ಬ್ರಾಹ್ಮಣರ ವಿರೋಧಿಗಳಲ್ಲ, ಬ್ರಾಹ್ಮಣ್ಯದ ವಿರೋಧಿಗಳು. ಸಂಘಟನೆಯ ವಿರೋಧಿಗಳಲ್ಲ, ಸಂಘ ಪರಿವಾರದ ವಿರೋಧಿಗಳು. ಹಿಂದೂ ವಿರೋಧಿಗಳಲ್ಲ, ಹಿಂದುತ್ವದ ವಿರೋಧಿಗಳು' ಎಂದರು. ಸಮಾವೇಶದಲ್ಲಿ ಮಂಡಿಸಿದ ಐದು ನಿರ್ಣಯಗಳು..

The Lingayat Dharma Mahasabha on Sunday set December 30 as the deadline for the state government to make a recommendation to the Centre for for separate religion tag for Lingayats. Lingayat convention held in Bengaluru, National College Grounds.

Share This Video


Download

  
Report form
RELATED VIDEOS