ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ಕಾರು ಚಾಲಕರು ಸೀಟ್ ಬೆಲ್ಟ್ ಧರಿಸಿಯೇ ಕಾರು ಚಲಾಯಿಸಬೇಕು ಇದು ನವೆಂಬರ್ 24ರಿಂದಲೇ ಅನ್ವಯವಾಗುತ್ತದೆ. ಪಾಲಿಸದಿದ್ದರೆ ದಂಡ ಕಟ್ಟಬೇಕಾಗುತ್ತದೆ ಎಂದು ಕಲಬುರಗಿ ಈಶಾನ್ಯ ವಲಯ ಐಜಿಪಿ ಅಲೋಕ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ. ಆಟೋ ಚಾಲಕರು ಕಡ್ಡಾಯವಾಗಿ ತಮ್ಮ ಸಮವಸ್ತ್ರ ಹಾಕಿರಬೇಕು. ಇದರ ಜತೆಗೆ ಪ್ರತಿಯೊಬ್ಬರು ತಮ್ಮ ಡ್ರೈವಿಂಗ್ ಲೈಸನ್ಸ್ ಹೊಂದಿರಬೇಕು, ವಾಹನಗಳ ದಾಖಲೆಯ ಪ್ರತಿಯಿಯನ್ನು ಕಡ್ಡಾಯವಾಗಿ ಇಟ್ಟುಕೊಂಡಿರಬೇಕು. ನಿಗದಿತ ಮಿತಿಯಲ್ಲಿ ವಾಹನಗಳ ಸ್ಪೀಡ್ ಇರಬೇಕು. ನಿಯಮ ಪಾಲಿಸದಿದ್ದರೆ ದಂಡ ಕಟ್ಟಲು ಸಿದ್ಧರಾಗಿ ಎಂದು ಕಲಬುರಗಿ, ಯಾದಗಿರಿ, ಬೀದರ್ ಜನರಿಗೆ ಅಲೋಕ್ ಕುಮಾರ್ ಹೇಳಿದರು. ಆಟೋ ಚಾಲಕರು ಕಡ್ಡಾಯವಾಗಿ ತಮ್ಮ ಸಮವಸ್ತ್ರ ಹಾಕಿರಬೇಕು. ಇದರ ಜತೆಗೆ ಪ್ರತಿಯೊಬ್ಬರು ತಮ್ಮ ಡ್ರೈವಿಂಗ್ ಲೈಸನ್ಸ್ ಹೊಂದಿರಬೇಕು, ವಾಹನಗಳ ದಾಖಲೆಯ ಪ್ರತಿಯಿಯನ್ನು ಕಡ್ಡಾಯವಾಗಿ ಇಟ್ಟುಕೊಂಡಿರಬೇಕು.
people of kalburgi ,bidar and yadagiri can no longer mess with the traffic police because the new rules have been made strict and violators are strictly punished.