ಕಾವೇರಿ ಜಲ ವಿವಾದದ ಬಗ್ಗೆ ಹೊಸ ಸುದ್ದಿ | Oneindia Kannada

Oneindia Kannada 2017-11-21

Views 488

Cauvery water issue: Supreme Court refused to entertain Tamil Nadu government's application seeking release of 63 TMC of water in Cauvery river from Karnataka for this year.


ಕಾವೇರಿ ನದಿ ನೀರಿನ ವಿವಾದವು 150 ವರ್ಷ ದಾಟಿದೆ. ನ್ಯಾಯಾಲಯದ ಮೆಟ್ಟಿಲೇರಿಯೂ ಅರ್ಧ ಶತಮಾನ ಕಳೆದಿದೆ. ಆದರೆ, ಪರಿಹಾರ ಇನ್ನೂ ದೊರಕಿಲ್ಲ. ಹಾಗೆಂದು ನ್ಯಾಯಾಲಯದ ಮೇಲೆ ನನಗೆ ವಿಶ್ವಾಸವಿಲ್ಲ ಎಂದಲ್ಲ. ಎಲ್ಲರೂ ಒಪ್ಪಿಕೊಳ್ಳುವಂತಹ ಉತ್ತಮ ಪರಿಹಾರ ಕಂಡುಕೊಳ್ಳಲು ಮಾತುಕತೆಯಿಂದ ಮಾತ್ರ ಸಾಧ್ಯ.ನದಿ ನೀರಿನ ವಿವಾದಕ್ಕೆ ಸಂಬಂಧಿಸಿದ ರಾಜ್ಯಗಳಲ್ಲಿನ ವಿವಿಧ ಕ್ಷೇತ್ರಗಳ ತಜ್ಞರನ್ನೊಳಗೊಂಡ ಸಮಿತಿ ರಚಿಸಿಕೊಳ್ಳಬೇಕು. ಅಧ್ಯಯನ, ಮಾತುಕತೆ ಮೂಲಕ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಬೇಕು. ಕಾವೇರಿ ಜಲ ವಿವಾದ: ತಮಿಳುನಾಡಿಗೆ ಸುಪ್ರಿಂ ಕೋರ್ಟಿನಲ್ಲಿ ಹಿನ್ನಡೆ. ಸದಾ ಕಾವೇರಿ ನೀರಿಗಾಗಿ ಕ್ಯಾತೆ ತೆಗೆಯುವ ತಮಿಳುನಾಡು ಸರಕಾರಕ್ಕೆ ಈ ಬಾರಿ ಸುಪ್ರಿಂ ಕೋರ್ಟ್ ನಲ್ಲಿ ಹಿನ್ನಡೆಯಾಗಿದೆ. ತಮಿಳುನಾಡು ಸರಕಾರ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯ ತಿರಸ್ಕರಿಸಿದೆ. ಈ ವರ್ಷ ಕರ್ನಾಟಕ ಸರಕಾರ ತನಗೆ 63 ಟಿಎಂಸಿ ನೀರು ನೀಡಬೇಕು ಎಂದು ಕೋರಿ ತಮಿಳುನಾಡು ಸರಕಾರ ಸುಪ್ರಿಂ ಕೋರ್ಟ್ ಅರ್ಜಿ ಸಲ್ಲಿಸಿತ್ತು. ಆದರೆ ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯ ತಿರಸ್ಕರಿಸಿದ್ದು ವಿಚಾರಣೆಗೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದೆ.ಇದರಿಂದ ಸದ್ಯಕ್ಕೆ ಕನ್ನಡಿಗರು ನಿರಾಳರಾಗಿದ್ದಾರೆ. ತಮಿಳುನಾಡು ಸರಕಾರ ಮತ್ತೆ ಇನ್ಯಾವ ಕ್ಯಾತೆ ತೆಗೆಯುತ್ತೋ ಕಾದು ನೋಡಬೇಕಾಗಿದೆ.

Share This Video


Download

  
Report form
RELATED VIDEOS