ವಾರವಿಡೀ ಗಳಿಸಿದ್ದನ್ನ ಒಂದೇ ನಿಮಿಷದಲ್ಲಿ ಹಾಳು ಮಾಡಿದ ಚಂದ್ರು, ಅನು! 'ಬಿಗ್ ಬಾಸ್' ಕನ್ನಡ ಇತಿಹಾಸದಲ್ಲಿ ನಾಲ್ಕು ಸೀಸನ್ ಗಳು ಕಳೆದಿವೆ. ಈ ನಾಲ್ಕು ಸೀಸನ್ ಗಳಲ್ಲಿ ತರಹೇವಾರಿ ಕಿತ್ತಾಟ, ಜಗಳ, ರಾದ್ಧಾಂತಗಳು ನಡೆದಿವೆ. ಆದ್ರೆ, ತಿಂಡಿ-ಊಟದ ವಿಚಾರಕ್ಕೆ ಯುದ್ಧ ನಡೆಯುತ್ತಿರುವುದು ಬಹುಶಃ ಇದೇ ಮೊದಲು. 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಮೊದಲ ದಿನದಿಂದಲೂ ಹಾಲು, ಹಣ್ಣು, ಐಸ್ ಕ್ರೀಮ್, ಬಿಸ್ಕತ್ತುಗಳಿಗಾಗಿ ಕೋಲಾಹಲ ನಡೆಯುತ್ತಲೇ ಇದೆ.! ''ಬಿಗ್ ಬಾಸ್' ಕಳುಹಿಸುವ ರೇಷನ್ ತುಂಬಾ ಕಮ್ಮಿ'' ಅಂತ ಸ್ಪರ್ಧಿಗಳು ದೂರುತ್ತಾರೆ. ಆದ್ರೀಗ, ಅದೇ 'ಬಿಗ್ ಬಾಸ್' ನೀಡುವ ಲಕ್ಷುರಿ ಬಜೆಟ್ ನ ಸದುಪಯೋಗ ಪಡಿಸಿಕೊಳ್ಳುವಲ್ಲಿ ಸ್ಪರ್ಧಿಗಳು ಅಕ್ಷರಶಃ ಸೋತಿದ್ದಾರೆ. ಇಬ್ಬರು ಮಾಡಿದ ಎಡವಟ್ಟಿನಿಂದಾಗಿ ಇಡೀ ಮನೆಗೆ ಲಕ್ಷುರಿ ಬಜೆಟ್ ಮಿಸ್ ಆಗಿದೆ.ಎಲ್ಲ ಸ್ಪರ್ಧಿಗಳಿಗೂ ಬೇಕಾಗಿರುವ ಸಾಮಾಗ್ರಿಗಳನ್ನ, ನೀಡಲಾದ ಸಮಯದಲ್ಲಿ ಲಕ್ಷುರಿ ಬಜೆಟ್ ಶಾಪಿಂಗ್ ಮಾಡುವ ಜಾಣತನ ಸ್ಪರ್ಧಿಗಳಿಗೆ ಇರಬೇಕು. ಅದು ಇರಲಿಲ್ಲ ಅಂದ್ರೆ, 'ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ' ಎಂಬಂತಾಗುತ್ತೆ. ಸದ್ಯ 'ಬಿಗ್ ಬಾಸ್' ಮನೆಯಲ್ಲಿ ಆಗಿರುವುದು ಇದೇ.!