ಐಶ್ವರ್ಯ ರೈ, ಪ್ರಿಯಾಂಕಾರಂತೆ 'ಮಾನುಷಿ ಚಿಲ್ಲರ್'ಗೂ ಅದೃಷ್ಟ | Filmibeat Kannada

Filmibeat Kannada 2017-11-23

Views 743

1994 ರಲ್ಲಿ ಐಶ್ವರ್ಯ ರೈ ಮತ್ತು 2000 ರಲ್ಲಿ ಪ್ರಿಯಾಂಕಾ ಚೋಪ್ರಾ ಇಬ್ಬರು ವಿಶ್ವ ಸುಂದರಿ ಪಟ್ಟ ಗೆಲ್ಲುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದರು. ನಂತರ ಇವರಿಬ್ಬರು ಬಾಲಿವುಡ್ ಎಂಬ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ರಾಣಿಯರಾಗಿ ಮಿಂಚಿದ್ದಾರೆ. ಕೇವಲ ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್ ಸಿನಿಮಾಗಳಲ್ಲೂ ಸಂಚಲನ ಸೃಷ್ಟಿಸಿದ್ದಾರೆ. ಇದೀಗ, ಇವರಂತೆ ನೂತನ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಗೂ ಅದೃಷ್ಟ ಒಲಿಯುತ್ತಾ ಎಂಬುದು ಸದ್ಯ ರಂಗೀನ್ ದುನಿಯಾದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಹಾಗಿದ್ರೆ, ಮಾನುಷಿ ಚಿಲ್ಲರ್ ಸಿನಿ ಲೋಕಕ್ಕೆ ಬರ್ತಾರ? ಸದ್ಯ ಮಿಸ್ ವರ್ಲ್ಡ್ ಏನ್ ಮಾಡ್ತಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.ವಿಶ್ವ ಸುಂದರಿ ಪಟ್ಟ ಗೆದ್ದ ಮಾನುಷಿ ಚಿಲ್ಲರ್ ಅವರ ಪೋಷಕರು ವೃತ್ತಿಯಲ್ಲಿ ಡಾಕ್ಟರ್ಸ್. ಹಾಗಾಗಿ, ಮಾನುಷಿ ಕೂಡ ಹೃದಯ ತಜ್ಞ ಡಾಕ್ಟರ್ ಆಗುವ ಗುರಿ ಹೊಂದಿದ್ದಾರೆ.ಸದ್ಯ, ಮಾನುಷಿ ಹರಿಯಾಣದ ಭಗತ್ ಪೂಲ್ ಸಿಂಗ್ ಸರ್ಕಾರಿ ಮೆಡಿಕಲ್ ಕಾಲೇಜ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.'ಮಿಸ್ ವರ್ಲ್ಡ್' ಗೆದ್ದ ಮೇಲೆ ಸಿನಿಮಾ ಆಫರ್ ಬರುವುದು ಸಾಮಾನ್ಯ. ಈ ಬಗ್ಗೆ ಮಾನುಷಿಗೂ ಕೂಡ ಆಸಕ್ತಿ ಇದ್ದು, ಒಳ್ಳೆ ಸ್ಕ್ರಿಪ್ಟ್ ಸಿಕ್ಕರೇ ಖಂಡಿತಾ ಆಕ್ಟ್ ಮಾಡ್ತಾರೆ ಎಂದು ಸ್ವತಃ ಮಾನುಷಿ ಅವರ ಆಪ್ತರು ತಿಳಿಸಿದ್ದಾರೆ.


India's manushi chhillar participated in miss world competition that was held in china and was crowned miss world and she made india proud . watch this video

Share This Video


Download

  
Report form
RELATED VIDEOS