How to link your Aadhaar number with flight ticket for faster airport entry.Under Modi government's 'Digi Yatra' programme. Airports Authority of India (AAI) has plans to implement the programme in other airports too.
ಫ್ಲೈಟ್ ಟಿಕೆಟ್ ಜತೆ ಆಧಾರ್ ಜೋಡಣೆ ಹೇಗೆ? ಏಕೆ? ಸಕಲ ನಾಗರಿಕ ಸೇವಾ ಸೌಲಭ್ಯಗಳ ಜತೆ ಆಧಾರ್ ಜೋಡಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಮುಂಬರುವ ವರ್ಷದಿಂದ ದೇಶಿ ವಿಮಾನಯಾನದಲ್ಲಿ ಭಾರಿ ಬದಲಾವಣೆಯಾಗಲಿದ್ದು, ವಿಮಾನ ಟಿಕೆಟ್ ಜತೆ ಆಧಾರ್ ನಂಬರ್ ಲಿಂಕ್ ಮಾಡುವ ಮೂಲಕ ಸುಲಭವಾಗಿ ಚೆಕ್ ಇನ್ ಮಾಡಬಹುದಾಗಿದೆ.ವಿಮಾನ ನಿಲ್ದಾಣದಲ್ಲಿ ಚೆಕ್ ಇನ್, ದಾಖಲೆಗಳ ಪರಿಶೀಲನೆ, ಬ್ಯಾಗೇಜ್ ಚೆಕಿಂಗ್ ಹೀಗೆ ಸಮಾರು ಹೊತ್ತು ಕಾಯಬೇಕಾಗುತ್ತದೆ. ಆದರೆ, 2018ರಿಂದ ದೇಶಿ ವಿಮಾನಯಾನದಲ್ಲಿ ಬದಲಾವಣೆ ತರಲಾಗುತ್ತಿದ್ದು, ಆಧಾರ್ ಜೊತೆಗೆ ಫ್ಲೈಟ್ ಟಿಕೆಟ್ ಜೋಡಣೆ ಮಾಡಿಕೊಂಡರೆ, ತಡೆರಹಿತ ವಿಮಾನಯಾನ ಸಾಧ್ಯವಾಗಲಿದೆ.ಆರಂಭದ ಹಂತದಲ್ಲಿ ಆಧಾರ್ ಆಧಾರಿತ ತಡೆರಹಿತ ವಾಯುಯಾನ- 'ಡಿಜಿ ಯಾತ್ರಾ ಯೋಜನೆ' ಅಡಿಯಲ್ಲಿ ಕೋಲ್ಕತ್ತಾ, ಅಹಮದಾಬಾದ್ ಮತ್ತು ವಿಜಯವಾಡ ವಿಮಾನ ನಿಲ್ದಾಣಗಳಲ್ಲಿ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ.