ಕಲರ್ಸ್ ಕನ್ನಡದಲ್ಲಿ ಬರುವ ಶನಿ ಧಾರಾವಾಹಿಯ ಬಗೆಗ್ ಎಕ್ಸ್ಕ್ಲೂಸಿವ್ ಮಾಹಿತಿ | Filmibeat Kannada

Filmibeat Kannada 2017-11-24

Views 4

Exclusive information about the main character of the Shani serial, Sunil Kumar.

ಯಾರೀ 'ಶನಿ' ಪಾತ್ರಧಾರಿ.? ಎಕ್ಸ್ ಕ್ಲೂಸಿವ್ ಮಾಹಿತಿ ಇಲ್ಲಿದೆ. ಕೆಲ ಜನರು ಸೀರಿಯಲ್ ಅಂದ್ರೆ ಉರಿದು ಬೀಳ್ತಾರೆ. ಇನ್ನು ಕೆಲವರು ಸೀರಿಯಲ್ ಅಂದ್ರೆ ಕಣ್ಣು ಮುಚ್ಚದೇ ನೋಡ್ತಾರೆ. ಸದ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಶನಿ' ಧಾರಾವಾಹಿಯ ಬಗ್ಗೆ ಎಲ್ಲರಲ್ಲೂ ಒಂದೇ ಅಭಿಪ್ರಾಯವಿದೆ. 'ಶನಿ' ಸೀರಿಯಲ್ ಚೆನ್ನಾಗಿ ಮೂಡಿ ಬರ್ತಿದೆ. ಸೀರಿಯಲ್ ನಲ್ಲಿ ಮೇನ್ ಅಟ್ರಾಕ್ಷನ್ ಅಂದ್ರೆ ಶನಿ ಪಾತ್ರಧಾರಿ. ಯಾರೀ ಹುಡುಗ.? ಕನ್ನಡದವನಾ? ಅಥವಾ ಬೇರೆ ಭಾಷೆಯಿಂದ ಕರೆತಂದ್ರಾ? ಎಲ್ಲೂ ಮಾಹಿತಿ ಸಿಕ್ತಿಲ್ವಲ್ಲಾ ಅಂತ ಅದೆಷ್ಟೋ ಜನರು ತಲೆ ಕೆಡಿಸಿಕೊಂಡು ಫೇಸ್ ಬುಕ್ ನಲ್ಲಿ ಕಲರ್ಸ್ ಕನ್ನಡ ಪೇಜ್ ಗೆ ಮೆಸೇಜ್ ಹಾಕ್ತಿದ್ದಾರೆ. ಆದ್ರೆ 'ಶನಿ' ಪಾತ್ರಧಾರಿ ಬಗೆಗಿನ ಕಂಪ್ಲೀಟ್ ಮಾಹಿತಿ ನಿಮಗಾಗಿ ಫಿಲ್ಮಿಬೀಟ್ ಕನ್ನಡದಲ್ಲಿ 'ಎಕ್ಸ್ ಕ್ಲೂಸಿವ್' ಆಗಿ ಕೊಡ್ತಿದ್ದೇವೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರೋ 'ಶನಿ' ಸೀರಿಯಲ್ ನ ಶನಿ ಪಾತ್ರಧಾರಿಯ ಹೆಸರು 'ಸುನೀಲ್ ಕುಮಾರ್'. ಸುನೀಲ್, ಚಾಮರಾಜನಗರದ ಮೂಲದವರು. ಚಿಕ್ಕಂದಿನಿಂದಲೇ ಅಭಿನಯದ ಬಗ್ಗೆ ಆಸಕ್ತಿ ಹೊಂದಿದ್ದ 'ಸುನೀಲ್ ಕುಮಾರ್' ರನ್ನ ಕಲರ್ಸ್ ಕನ್ನಡದ ತಂಡದವರು ಕರೆತಂದಿದ್ದಾರೆ.

Share This Video


Download

  
Report form
RELATED VIDEOS