ಕನ್ನಡ ಸಿನಿಮಾರಂಗದ ಮೇರು ನಟ ಡಾ.ವಿಷ್ಣುವರ್ಧನ್ ನಮ್ಮೆಲ್ಲರನ್ನ ಅಗಲಿ ಸಾಕಷ್ಟು ವರ್ಷಗಳು ಕಳೆದಿವೆ. ಆದ್ರೆ ಅವರ ನೆನಪು ಮಾತ್ರ ಇನ್ನೂ ಎಲ್ಲರ ಮನಸ್ಸಿನಲ್ಲಿ ಹಚ್ಚ ಹಸಿರಾಗಿದೆ. ವಿಷ್ಣುದಾದರನ್ನ ನೆನಪಿಸಿಕೊಂಡಾಗಲೆಲ್ಲಾ ಅಭಿಮಾನಿಗಳು ಅವ್ರ ಜಾಗವನ್ನ ತುಂಬೋದಕ್ಕೆ ಸಾಧ್ಯವಿರುವುದು ಕಿಚ್ಚನಿಗೆ ಮಾತ್ರ ಎನ್ನುವ ಮಾತುಗಳನ್ನ ಆಡಿದ್ರು. ಇದೀಗ ಅದಕ್ಕೊಂದು ಉತ್ತಮ ಉದಾಹರಣೆ ನಮ್ಮ ಮುಂದೆ ಇದೆ. ಅದನ್ನ ನಿಮಗೂ ತಿಳಿಸ್ತೀವಿ, ಮುಂದೆ ಓದಿ..ಕನ್ನಡ ಸಿನಿಮಾರಂಗದಲ್ಲಿ ಡಾ.ವಿಷ್ಣುವರ್ಧನ್ ರ ಸ್ಥಾನವನ್ನ ಯಾರು ತುಂಬ್ತಾರೆ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸಾಕಷ್ಟು ಬಾರಿ ಅಭಿಮಾನಿಗಳು ಕೇವಲ ಬಾಯಲ್ಲಿ ಕಿಚ್ಚ ಅವ್ರ ಸ್ಥಾನ ತುಂಬುವ ನಾಯಕ ಅಂತಿದ್ದರು. ಈಗ ಅದು ನಿಜ ಆಗಿದೆ. ಕಿಚ್ಚ ಸುದೀಪ್ ಇತ್ತೀಚಿಗೆ ವಿಷ್ಣುದಾದರನ್ನ ಹೋಲುತ್ತಿದ್ದಾರೆ ಅನ್ನೋದು ಅಭಿಮಾನಿಗಳ ಅಭಿಪ್ರಾಯ.'ದಿ ವಿಲನ್' ಸಿನಿಮಾದ ಚಿತ್ರೀಕರಣದಲ್ಲಿ ಕಿಚ್ಚ ಸುದೀಪ್ ಭಾಗಿಯಾಗಿದ್ದಾರೆ. ಇತ್ತೀಚೆಗಷ್ಟೇ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಮುಗಿಸಿ ಮೈಸೂರಿಗೆ ಬಂದಿದ್ದಾರೆ. ಚಿಕ್ಕಮಗಳೂರಿನಲ್ಲಿ ಚಿತ್ರೀಕರಣದ ವೇಳೆಯಲ್ಲಿ ತೆಗೆದ ಫೋಟೋದಲ್ಲಿ ಕಿಚ್ಚನ ಕಣ್ಣುಗಳು 'ವಿಷ್ಣು'ದಾದ ಕಣ್ಣುಗಳನ್ನೇ ಹೋಲುತ್ತಿವೆ.
lots of Similarities between Vishnuvardhan and Sudeep. this fan saw vishnu daada in sudeep's eyes , watch this video