10 ದಿನದ ಅಧಿವೇಶನಕ್ಕೆ 30 ಕೋಟಿ ಖರ್ಚು. 10 ದಿನ ನಡೆದ ಚಳಿಗಾಲದ ಅಧಿವೇಶನದ ಒಟ್ಟು ಖರ್ಚು ಕೇಳಿ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಹೌಹಾರಿಬಿಟ್ಟರು. ಕಳೆದ ಬಾರಿಯ ಅಧಿವೇಶನಕ್ಕೆ ಹೋಲಿಸಿದರೆ ಈ ಬಾರಿಯ ಖರ್ಚು ದ್ವಿಗುಣಗೊಂಡಿದೆ. ಇದು ಸಿದ್ದರಾಮಯ್ಯ ಅವರ ಅನುಮಾನಕ್ಕೆ ಕಾರಣವಾಗಿದೆ.ಒಟ್ಟಾರೆ ಅಧಿವೇಶನದ ಖರ್ಚಿನ ಲೆಕ್ಕ ಕೊಟ್ಟಿರುವ ವಿಧಾನಸೌಧದ ಸಚಿವಾಲಯ 30 ಕೋಟಿ ರೂಪಾಯಿ ಬಿಲ್ ಅನ್ನು ಸರ್ಕಾರಕ್ಕೆ ನೀಡಿದೆ. ಖರ್ಚು ನೋಡಿ ಹೌಹಾರಿದ ಸಿದ್ದರಾಮಯ್ಯ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಕಳೆದ ಬಾರಿ 18.75 ಕೋಟಿ ಖರ್ಚಾಗಿತ್ತು ಆದರೆ ಈಗ ಯಾಕೆ 30 ಕೋಟಿ ಖರ್ಚಾಗಿದೆ ಯಾವ ಯಾವದಕ್ಕೆ ಎಷ್ಟು ಖರ್ಚು ಮಾಡಿದಿರಿ ಲೆಕ್ಕ ತೋರಿಸಿ ಎಂದು ಸಿದ್ದರಾಮಯ್ಯ ಅವರು ಅಧಿಕಾರಿಗಳ ಮೇಲೆ ಹರಿಹಾಯ್ದರು.ಒಂದು ಊಟಕ್ಕೆ ಎಷ್ಟು ಲೆಕ್ಕ ಹಾಕಿದ್ದೀರಾ? ವಸತಿಗೆಷ್ಟು, ವಾಹನಕ್ಕೆಷ್ಟು, ಎಲ್ಲ ಲೆಕ್ಕ ಕೊಡಿ ಎಂದು ಸಿದ್ದರಾಮಯ್ಯ ಸೂಚಿಸಿದರು. ಇದರಿಂದ ಅವಕ್ಕಾದ ಅಧಿಕಾರಿಗಳು ಒಂದು ಊಟಕ್ಕೆ 475 ರೂಪಾಯಿ ಖರ್ಚು ಮಾಡಿರುವುದಾಗಿ ಹೇಳಿದರು.