'ಬಿಗ್ ಬಾಸ್' ಮನೆಯಿಂದ ಹೊರ ಹೋಗ್ತಾರಂತೆ ನಟಿ ಅನುಪಮಾ ಗೌಡ! 'ಅಕ್ಕ' ಧಾರಾವಾಹಿ ಖ್ಯಾತಿಯ ನಟಿ ಅನುಪಮಾ ಗೌಡಗೆ 'ಬಿಗ್ ಬಾಸ್' ಮನೆ ಸಾಕಾಗಿ ಹೋಗಿದ್ಯಂತೆ. 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ನಟಿ ಅನುಪಮಾ ಗೌಡ ಮನಸ್ಸು ಮಾಡಿದ್ದಾರೆ. ಹಾಲಿನ ಪ್ಯಾಕೆಟ್ ಗಳನ್ನು ಮುಚ್ಚಿಟ್ಟು, ಸಮೀರಾಚಾರ್ಯ ಅವರಿಗೆ ಒಂದು ಲೋಟ ಹಾಲು ಕೊಡದೆ ದೊಡ್ಡ ರಾದ್ದಾಂತಕ್ಕೆ ಪರೋಕ್ಷವಾಗಿ ಕಾರಣವಾಗಿದ್ದ ಅನುಪಮಾ... ಜೆಕೆಗೆ ಮಾತ್ರ ಸೀಮಿತವಾಗಿದ್ದ ಚಾಕಲೇಟ್ ನ ಕದ್ದು ತಿಂದು ಶಿಕ್ಷೆ ಅನುಭವಿಸಿದ್ದ ಅನುಪಮಾಗೆ ಈಗ 'ಬಿಸ್ಕತ್ತು ಲೆಕ್ಕ'ದ ಬಗ್ಗೆ ಕಿರಿಕಿರಿ ಉಂಟಾಗಿದೆ. 'ಬಿಗ್ ಬಾಸ್' ಮನೆಯಲ್ಲಿ ಬಿಸ್ಕತ್ತುಗಳನ್ನೂ ಲೆಕ್ಕ ಮಾಡಿ ತಿನ್ನುವ ಪರಿಸ್ಥಿತಿ ಬಂದಿರುವುದು ಅನುಪಮಾ ಗೌಡಗೆ ಇಷ್ಟ ಆಗುತ್ತಿಲ್ಲವಂತೆ. ಹೀಗಾಗಿ ಅವರಿಗೆ ವಾಪಸ್ ಮನೆಗೆ ಹೋಗುವ ಇಚ್ಛೆಯಾಗಿದೆ. ''ಇಲ್ಲಿ ಜನರ ಮೆಂಟಾಲಿಟಿ ನನಗೆ ಇಷ್ಟ ಆಗುತ್ತಿಲ್ಲ. ನನಗೆ ಮನೆಗೆ ಹೋಗಬೇಕು ಅಂತ ಅನಿಸುತ್ತಿದೆ'' ಎಂದು ಶ್ರುತಿ ಪ್ರಕಾಶ್ ಬಳಿ ಅನುಪಮಾ ಗೌಡ ಹೇಳಿಕೊಂಡಿದ್ದಾರೆ.