ರಿಯಾಝ್ ಮತ್ತು ದಿವಾಕರ್ ನಡುವೆ ಮೂಡಿದೆ ಮನಸ್ತಾಪ! 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಅಣ್ಣ-ತಮ್ಮಂದಿರಂತೆ, ಉತ್ತಮ ಸ್ನೇಹಿತರಂತೆ ಮೊದಲೆರಡು ವಾರ ಕಂಡುಬಂದ ರಿಯಾಝ್ ಹಾಗೂ ದಿವಾಕರ್ ಈಗ ಹಾವು-ಮುಂಗುಸಿಯಂತಾಗಿದ್ದಾರೆ. ಮೊದಲು ಜಯಶ್ರೀನಿವಾಸನ್ ಜೊತೆ ಮುನಿಸಿಕೊಂಡು ಕಿತ್ತಾಡಿದ್ದ ದಿವಾಕರ್ ಇದೀಗ ರಿಯಾಝ್ ಜೊತೆ ಜಗಳ ಆಡಿದ್ದಾರೆ.ಟಾಸ್ಕ್ ವಿಚಾರವಾಗಿ ದಿವಾಕರ್ ಆಟದ ವೈಖರಿ ಬಗ್ಗೆ ರಿಯಾಝ್ ಕಾಮೆಂಟ್ ಮಾಡಿದ್ದಕ್ಕೆ ರಿಯಾಝ್ ವಿರುದ್ಧ ದಿವಾಕರ್ ತಿರುಗಿ ಬಿದ್ದಿದ್ದಾರೆ. ಮೊನ್ನೆಯಷ್ಟೇ ಕ್ಯಾಪ್ಟನ್ ನಿವೇದಿತಾ ಗೌಡ ಹಾಗೂ ದಿವಾಕರ್ ನಡುವೆ ಗಲಾಟೆ ಆಗಿತ್ತು. ದಿವಾಕರ್-ನಿವೇದಿತಾ ನಡುವೆ ಎಲ್ಲವೂ ಸರಿಹೋಯ್ತು ಎನ್ನುವಷ್ಟರಲ್ಲಿ ದಿವಾಕರ್-ರಿಯಾಝ್ ಮಧ್ಯೆ ಮನಸ್ತಾಪ ಮೂಡಿದೆ.ಆಟದಲ್ಲಿ ದಿವಾಕರ್ ಚೆನ್ನಾಗಿ ಆಡಿದ್ರೆ, ತಮ್ಮ ತಂಡಕ್ಕೆ ಇನ್ನೂ ಹೆಚ್ಚು ಪಾಯಿಂಟ್ಸ್ ಬರುತ್ತಿತ್ತು ಎಂದು ರಿಯಾಝ್ ಕಾಮೆಂಟ್ ಮಾಡಿದರು.''ನಾನು'' ಎನ್ನೋದು ರಿಯಾಝ್ ರವರಲ್ಲಿ ಸ್ವಲ್ಪ ಜಾಸ್ತಿ ಇದೆ ಎಂಬುದು ದಿವಾಕರ್ ರವರ ವಾದ.