ಕುರುಕ್ಷೇತ್ರದ 'ಬಿಗ್' ನ್ಯೂಸ್: ದರ್ಶನ್ ಗೆ ಕನ್ನಡದ ಸ್ಟಾರ್ ನಟಿ ನಾಯಕಿ | Filmibeat Kannada

Filmibeat Kannada 2017-11-25

Views 2.4K

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕುರುಕ್ಷೇತ್ರ' ಸಿನಿಮಾದ ಚಿತ್ರೀಕರಣ ಕೊನೆಯ ಹಂತ ತಲುಪಿದ್ದು, ಗದಾಯುದ್ಧ ದೃಶ್ಯವನ್ನ ಚಿತ್ರೀಕರಿಸುವುದಕ್ಕೆ ಸಖಲ ತಯಾರಿ ಆಗುತ್ತಿದೆ. ಇದರ ಬೆನ್ನಲ್ಲೇ ಈಗ 'ಕುರುಕ್ಷೇತ್ರ' ಅಡ್ಡದಿಂದ ಬಿಗ್ ನ್ಯೂಸ್ ವೊಂದು ಹೊರಬಿದ್ದಿದೆ. ದುರ್ಯೋಧನ ದರ್ಶನ್ ಗೆ ನಾಯಕಿ ಅಂತಿಮವಾಗಿದ್ದಾರೆ. ಅದು ಕನ್ನಡದ ನಟಿಯೇ ಜೋಡಿಯಾಗುತ್ತಿರುವುದು ಸ್ಯಾಂಡಲ್ ವುಡ್ ಗೆ ಖುಷಿ ಕೊಟ್ಟಿದೆ. ಹಾಗಿದ್ರೆ, ದರ್ಶನ್ ಅವರ 50ನೇ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿರುವ ನಟಿ ಯಾರು? ಎಂದು ತಿಳಿಯಲು ಮುಂದೆ ಓದಿ.ಸ್ಯಾಂಡಲ್ ವುಡ್ ನ ಬಹುದೊಡ್ಡ ತಾರಬಳಗ ಮತ್ತು ದೊಡ್ಡ ಬಜೆಟ್ ಸಿನಿಮಾ ಕುರುಕ್ಷೇತ್ರಕ್ಕೆ ಕನ್ನಡ ನಟಿ ಮೇಘನಾ ರಾಜ್ ಎಂಟ್ರಿ ಕೊಟ್ಟಿದ್ದಾರೆ.ಕುರುಕ್ಷೇತ್ರದಲ್ಲಿ ಮೇಘನಾ ರಾಜ್ ದುರ್ಯೋಧನ ದರ್ಶನ್ ಅವರಿಗೆ ಜೋಡಿಯಾಗಿದ್ದು, ಭಾನುಮತಿ ಪಾತ್ರ ನಿರ್ವಹಿಸಲಿದ್ದಾರಂತೆ.ಈ ಮುಂಚೆ ಭಾನುಮತಿ ಪಾತ್ರಕ್ಕೆ ದಕ್ಷಿಣ ಭಾರತದ ಖ್ಯಾತ ನಟಿಯರಾದ ರೆಜಿನಾ ಮತ್ತು ರಮ್ಯಾ ನಂಬಿಸೇನ್ ಆಯ್ಕೆ ಆಗಿದ್ದರು ಎನ್ನಲಾಗಿತ್ತು. ಆದ್ರೀಗ, ಅವರಿಬ್ಬರ ಬದಲು ಮೇಘನಾ ಅವಕಾಶ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

Kannada Actor Challenging Star Darshan's 50th movie 'Kurukshetra'.Kannada Actress Meghana Raj would be playing the role of Bhanumathi who is wife of Duryodhana in kurukshetra,. watch this video

Share This Video


Download

  
Report form
RELATED VIDEOS